ವೇಣೂರು: ಸರಕಾರಿ ಪ್ರೌಢ ಶಾಲೆಗೆ OSAAT ಕಟ್ಟಡದ ದಾನಿಗಳ ಭೇಟಿ

0

ಉಜಿರೆ: ವೇಣೂರು ಸರ್ಕಾರಿ ಪ್ರೌಢಶಾಲೆಗೆ OSAAT ಸಂಸ್ಥೆಯಿಂದ ಐದು ಕೊಠಡಿಗಳು, ಶೌಚಾಲಯ ಹಾಗೂ ಬಾಲಕಿಯರಿಗೆ ಪಿಂಕ್ ರೂಮ್ 1.25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ಇದನ್ನು ನೀಡಿದ ದಾನಿಗಳಾದ ಅಮೆರಿಕದ ವಸಂತ ರಾಮ್ ಸೋಮಯಾಜಿ ಜ. 21ರಂದು ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು. OSAAT ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣರಾವ್, ಕಿಶೋರ್ ಕುಮಾರ್ ಉಪಸ್ಥಿತರಿದ್ದರು.

ಪದ್ಮಾಂಬ ಸಮೂಹ ಸಂಸ್ಥೆಯ ಮಾಲಕ ಜಿನರಾಜ್ ಜೈನ್, SDMC ಸದಸ್ಯರಾದ ಆದಮ್ ಕೊಪ್ಪದ ಬಾಕಿಮಾರು, ಶl ಸೌಮ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ಉಪ ಪ್ರಾಂಶುಪಾಲ ವೆಂಕಟೇಶ ತುಳುಪುಳೆ ಸ್ವಾಗತಿಸಿದರು. ರವೀಂದ್ರ .ಕೆ ಕನ್ನಡ ಶಿಕ್ಷಕರು ಅತಿಥಿಗಳ ಪರಿಚಯ ಮಾಡಿದರು. ಜ್ಯೋತಿ ಡಿಸೋಜ ಅನಸೂಯ ಫಾಟಕ್ ಹಾಗೂ ಲೆವಿನಾ ಕಾರ್ಯಕ್ರಮ ನಿರ್ವಹಿಸಿದರು. ಗಣಿತ ಶಿಕ್ಷಕಿ ಸುಕನ್ಯಾ ಪ್ರಭು ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here