






ಉಜಿರೆ: 2025-26ನೇ ಸಾಲಿನ ಸೈನ್ಸ್ ಒಲಂಪಿಯಾಡ್ ಫೌಂಡೇಶನ್ ನಡೆಸಿದ ಇಂಟರ್ ನ್ಯಾಷನಲ್ ಕಾಮರ್ಸ್ ಒಲಂಪಿಯಾಡ್ ಪರೀಕ್ಷೆಯಲ್ಲಿ 7 ವಿದ್ಯಾರ್ಥಿಗಳು, ಇಂಗ್ಲೀಷ್ ಒಲಂಪಿಯಾಡ್ ಪರೀಕ್ಷೆಯಲ್ಲಿ 25 ವಿದ್ಯಾರ್ಥಿಗಳು, ಹಾಗೂ ನ್ಯಾಷನಲ್ ಸೈನ್ಸ್ ಒಲಂಪಿಯಾಡ್ ಪರೀಕ್ಷೆಯಲ್ಲಿ 11 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಇಬ್ಬರು ವಿದ್ಯಾರ್ಥಿಗಳು ಎರಡನೇ ಹಂತದ ಇಂಟರ್ನ್ಯಾಷನಲ್ ಇಂಗ್ಲಿಷ್ ಒಲಂಪಿಯಾಡ್ ಪರೀಕ್ಷೆಗೆ ಅರ್ಹತೆಯನ್ನು ಪಡೆದಿರುತ್ತಾರೆ.



ಈ ಪರೀಕ್ಷೆಗಳನ್ನು ಕಾಲೇಜಿನ ಎಸ್.ಒ.ಎಫ್ ನ ಸಂಯೋಜಕಿ, ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಸೌಮ್ಯ ಕೆ.ಪಿ., ಆಂಗ್ಲ ಭಾಷಾ ವಿಭಾಗದ ಉಪನ್ಯಾಸಕಿ ಸುಪ್ರೀತಾ ಪಡಿವಾಳ್, ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿ ಪ್ರಭಾವತಿ ನಡೆಸಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ., ಉಪ ಪ್ರಾಂಶುಪಾಲ ಡಾ. ರಾಜೇಶ್ ಬಿ. ಹಾಗೂ ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ.









