



ಪಟ್ರಮೆ: ರೂ. 31 ಲಕ್ಷ ವೆಚ್ಚದ ಅನುದಾನದಲ್ಲಿ ನಿರ್ಮಾಣವಾದ ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡ “ಕ್ಷೀರ ವಾರಿಧಿ” ಇದರ ಲೋಕಾರ್ಪಣೆ ಹಾಗೂ ಉದ್ಘಾಟನಾ ಸಮಾರಂಭವು ಡಿ.14ರಂದು ಅನಾರು ಪಟ್ರಮೆಯ ಸಮರ್ಪಣಾ ಸಭಾಭವನದಲ್ಲಿ ನಡೆಯಿತು.
ನೂತನ ಕಟ್ಟಡ ಉದ್ಘಾಟನೆಯನ್ನು ಮಂಗಳೂರು ಮಂಗಳೂರಿನ ದ.ಕ.ಜಿ.ಪ.ಸ.ಹಾ.ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಅವರು ನೆರವೇರಿಸಿದರು. ದೀಪ ಪ್ರಜ್ವಲನೆಯನ್ನು ಅನಾರು ಪಟ್ರಮೆಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರರಾದ ನಿತೇಶ್ ಬಲ್ಲಾಳ್ ಉಳಿಯಬೀಡು ನೆರವೇರಿಸಿದರು.

ನಾಮಫಲಕ ಉದ್ಘಾಟನೆಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕೊಕ್ಕಡ ಸಿ.ಎ. ಬ್ಯಾಂಕ್ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ ನೆರವೇರಿಸಿದರು. ಆಡಳಿತ ಮಂಡಳಿ ಕೊಠಡಿ ಉದ್ಘಾಟನೆಯನ್ನು ದ.ಕ.ಜಿ.ಪ.ಸ.ಹಾ.ಒಕ್ಕೂಟದ ನಿರ್ದೇಶಕ ಜಯರಾಮ್ ರೈ ಬಳ್ಳಜ್ಜ ಅವರು ನೆರವೇರಿಸಿದರು.

ದಾಸ್ತಾನು ಕೊಠಡಿ ಉದ್ಘಾಟನೆಯನ್ನು ದ.ಕ.ಜಿ.ಪ.ಸ.ಹಾ.ಒಕ್ಕೂಟದ ನಿರ್ದೇಶಕಿ ಸವಿತಾ ಎಂ ಶೆಟ್ಟಿ ನೆರವೇರಿಸಿದರು. ವಾಣಿಜ್ಯ ಕೊಠಡಿ ಉದ್ಘಾಟನೆಯನ್ನು ದ.ಕ.ಜಿ.ಪ.ಸ.ಹಾ.ಒಕ್ಕೂಟದ ನಿರ್ದೇಶಕ ಪ್ರಭಾಕರ ಆರಂಬೋಡಿ ನೆರವೇರಿಸಿದರು.

ಕಾರ್ಯಾಲಯ ಉದ್ಘಾಟನೆಯನ್ನು ದ.ಕ.ಜಿ.ಪ.ಸ.ಹಾ.ಒಕ್ಕೂಟದ ನಿರ್ದೇಶಕ ಚಂದ್ರಶೇಖರ್ ರಾವ್ ನೆರವೇರಿಸಿದರು. ಹಾಲು ಸಂಗ್ರಹ ಕೊಠಡಿ ಉದ್ಘಾಟನೆಯನ್ನು ದ.ಕ.ಜಿ.ಪ.ಸ.ಹಾ.ಒಕ್ಕೂಟದ ನಿರ್ದೇಶಕ ಭರತ್ ನೆಕ್ರಾಜೆ ಅವರು ನೆರವೇರಿಸಿದರು.



ಸಭಾ ಕಾರ್ಯಕ್ರಮ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಮರ್ಪಣಾ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜಾ ನೆರವೇರಿಸಿದರು. ಅಧ್ಯಕ್ಷತೆಯನ್ನು ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದೇವಪಾಲ ಅಜ್ರಿ ಉಳಿಯಬೀಡು ವಹಿಸಿದ್ದರು.
ಶಾಸಕ ಹರೀಶ್ ಪೂಂಜಾ ಮಾತನಾಡಿ ಗ್ರಾಮೀಣ ಹೈನುಗಾರರ ವೃತ್ತಿ ಜೀವನಕ್ಕೆ ಕ್ಷೀರವಾರಿಧಿ ಕಟ್ಟಡವು ಶಕ್ತಿಯಾಗಿ ಪ್ರಯೋಜನಕಾರಿಯಾಗಲಿದೆ. ಕೆಎಂಎಫ್ ನ ವತಿಯಿಂದ ಬೆಳ್ತಂಗಡಿಯಲ್ಲಿ ಹೊಸ ಉದ್ಯಮ ಸ್ಥಾಪಿಸುವ ಮೂಲಕ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಎಂದು ವಿನಂತಿಸಿದರು. ಕೃಷಿಕರಿಗೆ ಕೃಷಿ ಸಮ್ಮಾನ್ ಯೋಜನೆ, ಫಸಲ್ ಭೀಮಾ ಯೋಜನೆ ಹಾಗೂ ಇತರ ಯೋಜನೆಯನ್ನು ಒದಗಿಸುವ ಮೂಲಕ ಕೃಷಿಕರ ಜೀವನವನ್ನು ಸುಧಾರಿಸಲು ಸದಾ ಪ್ರಯತ್ನಿಸುತ್ತಿದ್ದೇವೆ ಎಂದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪುರಂದರ ಎಸ್. ಸೂರ್ಯತ್ತಾವು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವರದಿ ವಾಚಿಸಿದರು.

ವೇದಿಕೆಯಲ್ಲಿ ದ.ಕ.ಜಿ.ಪ.ಸ.ಹಾ.ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ, ಅನಾರು ಪಟ್ರಮೆಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರ ನಿತೇಶ್ ಬಲ್ಲಾಳ್ ಉಳಿಯಬೀಡು, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕೊಕ್ಕಡ ಸಿ.ಎ. ಬ್ಯಾಂಕ್ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ, ದ.ಕ.ಜಿ.ಪ.ಸ.ಹಾ. ಒಕ್ಕೂಟದ ನಿರ್ದೇಶಕರಾದ ಜಯರಾಮ ರೈ ಬಳ್ಳಜ್ಜ, ಸವಿತಾ ಎನ್. ಶೆಟ್ಟಿ, ಪ್ರಭಾಕರ ಆರಂಬೋಡಿ, ಚಂದ್ರಶೇಖರ ರಾವ್, ಭರತ್ ನೆಕ್ರಾಜೆ, ದ.ಕ.ಜಿ.ಪ.ಸ.ಹಾ. ಒಕ್ಕೂಟದ ವ್ಯವಸ್ಥಾಪಕ ರವಿರಾಜ ಉಡುಪ, ಉಪ ವ್ಯವಸ್ಥಾಪಕ ಸತೀಶ್ ರಾವ್, ಸಹಾಯಕ ವ್ಯವಸ್ಥಾಪಕ ಜಿತೇಂದ್ರ ಪ್ರಸಾದ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುರಂದರ ಎಸ್., ಉಪಾಧ್ಯಕ್ಷ ಡೀಗಯ್ಯ ಗೌಡ, ಕಿರಣ್ಚಂದ್ರ ಪುಷ್ಪಗಿರಿ, ಗ್ರಾಮ ಪಂಚಾಯತ್ ಪಟ್ರಮೆಯ ಅಧ್ಯಕ್ಷ ಮನೋಜ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಶೋಧರ್ ಕುಮಾರ್, ವಿಸ್ತರಣಾಧಿಕಾರಿ ಮಾಲತಿ, ಹಾಗೂ ಬೆನಕ ಕನ್ಸ್ಟ್ರಕ್ಷನ್ ಮಾಲಕ ಇಂಜಿನಿಯರ್ ಗಣೇಶ್ ಗೌಡ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರು, ಸದಸ್ಯರು, ಸಿಬ್ಬಂದಿಗಳು ಹಾಗೂ ಕೃಷಿಕರು ಉಪಸ್ಥಿತರಿದ್ದರು.
ಭವ್ಯಾ ಮತ್ತು ಬಳಗದವರು ಪ್ರಾರ್ಥಿಸಿದರು. ಅನಾರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ರುಕ್ಮಯ್ಯ ಗೌಡ ಸ್ವಾಗತಿಸಿದರು. ಎಸ್. ಡಿ. ಎಂ ಕಾಲೇಜು ಉಪನ್ಯಾಸಕ ಮಹಾವೀರ ಜೈನ್ ಕಾರ್ಯಕ್ರಮ ನಿರೂಪಿಸಿದರು.









