ಅಳದಂಗಡಿ: ವಿಲ್ಮಾ ಲವೀನಾ ಡಿಸೋಜಾ ರವರಿಗೆ ಪಿ.ಎಚ್.ಡಿ ಪದವಿ

0

ಬೆಳ್ತಂಗಡಿ: ಬಿ.ಎಂ.ಎಸ್ ಎಂಜಿನಿಯರಿಂಗ್ ಕಾಲೇಜು ಬೆಂಗಳೂರು ಇದರ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ವಿಲ್ಮಾ ಲವೀನಾ ಡಿಸೋಜಾ ಅವರು ಮಂಡಿಸಿದ ‘Some recent development in theory of domination in graphs’ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಪಿ.ಎಚ್.ಡಿ ಪದವಿ ನೀಡಿದೆ.
ಈ ಸಂಶೋಧನಾ ಕಾರ್ಯಕ್ಕೆ ಡಾ. ಚೈತ್ರಾ ವಿ ಮಾರ್ಗದರ್ಶನ ನೀಡಿದ್ದರು. ಅವರು ಬಂಟ್ವಾಳ ತಾಲೂಕಿನ ಅಮ್ಮಾಡಿ ಗ್ರಾಮದ ವಲೇರಿಯನ್‌ ಡಿಸೋಜಾ ಮತ್ತು ಲಿಲ್ಲಿ ಡಿಸೋಜಾ ದಂಪತಿಯ ಪುತ್ರಿಯಾಗಿದ್ದು ಅಳದಂಗಡಿಯ ವಿಜಯ ಮೊನಿಸ್ ರವರ ಪತ್ನಿಯಾಗಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಜೋಸೆಫರ ವಿಶ್ವವಿದ್ಯಾಲಯ ಬೆಂಗಳೂರು ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here