ಬೆಳ್ತಂಗಡಿ: ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ಮುಚ್ಚಿದ ಕೋರ್ಟ್ ನಲ್ಲಿ 183 ಬಿ.ಎನ್.ಎಸ್.ಎಸ್. ರಡಿ ತನ್ನ ಸ್ವ ಇಚ್ಛಾ ಹೇಳಿಕೆ ನೀಡಲು ಸೆ.27ರಂದು ಮತ್ತೆ ಬೆಳ್ತಂಗಡಿ ಕೋರ್ಟ್ ಗೆ ಆಗಮಿಸಿದ್ದಾರೆ.
ಸೆ.18, 23, 25ರಂದು ಆರೋಪಿ ಚಿನ್ನಯ್ಯನನ್ನು ಶಿವಮೊಗ್ಗ ಪೊಲೀಸರು ಬೆಳ್ತಂಗಡಿ ಕೋರ್ಟ್ ಗೆ ಕರೆ ತಂದಿದ್ದರು. ಅದರಲ್ಲಿ ಸೆ.23 ಮತ್ತು 25ರಂದು ಭಾಗಶಃ ಹೇಳಿಕೆ ದಾಖಲಿಸಿದ ನಂತರ ಇಂದು ಮತ್ತೆ ಉಳಿದ ಹೇಳಿಕೆ ನೀಡಲಿರುವುದರಿಂದ ಶಿವಮೊಗ್ಗ ಪೊಲೀಸರು ಮತ್ತೆ ಚಿನ್ನಯ್ಯನನ್ನು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಬೆಳ್ತಂಗಡಿ ತಾಲೂಕು ನ್ಯಾಯಾಲಯದ ಹೆಚ್ಚುವರಿ ವ್ಯವಹಾರಿಕ ಮತ್ತು ಪ್ರಥಮ ದರ್ಜೆ ನ್ಯಾಯಾಧೀಶ ವಿಜಯೇಂದ್ರ ಮುಂದೆ ಹಾಜರಾಗಿ ಚಿನ್ನಯ್ಯ ತನ್ನ ಮುಂದುವರಿದ ಸ್ವ ಇಚ್ಛಾ ಹೇಳಿಕೆ ನೀಡಲು ಹಾಜರಾಗಿದ್ದಾನೆ.