ಬೆಳಾಲು: ನಿಂತಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ಸೆ. 26ರಂದು ಪೌಷ್ಟಿಕ ಆಹಾರ ಸಪ್ತಾಹ, ಕೃಷ್ಣಾಷ್ಟಮಿ ಪ್ರಯುಕ್ತ ಮಕ್ಕಳಿಗೆ ಕೃಷ್ಣವೇಶ ಹಾಗೂ ಶಿಕ್ಷಕರ ದಿನಾಚರಣೆ ನಡೆಸಲಾಯಿತು. ಸಭೆಯಲ್ಲಿ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಹೇಮಾವತಿ, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಮಂಜು, ಆರೋಗ್ಯ ಸಹಾಯಕಿ ಹರಿಣಾಕ್ಷಿ, ಸಿ.ಎಚ್.ಓ ತೇಜಾವತಿ, ಆಶಾ ಕಾರ್ಯಕರ್ತೆ ಶೀಲಾವತಿ, ಸ್ಥಳೀಯರಾದ ಉಷಾದೇವಿ, ಮಾಜಿ ಅಧ್ಯಕ್ಷೆ ಭವಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪೌಷ್ಟಿಕ ಆಹಾರ ಸಪ್ತಾಹದ ಬಗ್ಗೆ ವೈದ್ಯಾಧಿಕಾರಿಗಳು ಮಾಹಿತಿಯನ್ನು ನೀಡಿದರು. ಹಾಗೂ ಕೃಷ್ಣಾಷ್ಟಮಿ ಮತ್ತು ಶಿಕ್ಷಕರ ದಿನಾಚರಣೆಯ ಬಗ್ಗೆ ಭವಾನಿ ಮಾತನಾಡಿದರು. ಹಾಗೂ ಕೃಷ್ಣ ವೇಷ ಹಾಕಿದ ಮಕ್ಕಳಿಗೆ ಪುನೀತ್ ಕುಮಾರ್ ಪ್ರೋತ್ಸಾಹ ಬಹುಮಾನವನ್ನು ನೀಡಿ ಮಕ್ಕಳನ್ನು ಪ್ರೋತ್ಸಾಹಿಸಿದರು.

ಮಕ್ಕಳ ತಾಯಂದಿರು ವಿವಿಧ ಬಗೆಯ ಪೌಷ್ಠಿಕ ಆಹಾರವನ್ನು ತಯಾರಿಸಿ ಬಂದಿದ್ದರು. ಅಂಗನವಾಡಿ ಸಹಾಯಕಿ ಸಹಕರಿಸಿದರು. ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಭಾರತಿ ನಿರೂಪಿಸಿ, ಆಶಾ ಕಾರ್ಯಕರ್ತೆ ಶೀಲಾವತಿ ವಂದಿಸಿದರು.