ಬೆಳ್ತಂಗಡಿ: ಆ. 24ರಂದು ಭಾರತ್ ಸ್ಕೌಟ್ ಮತ್ತು ಗೈಡ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿ ಆಶ್ರಯದಲ್ಲಿ ನಡೆದ ಸ್ಕೌಟ್/ಗೈಡ್, ಕಬ್/ಬುಲ್ ಬುಲ್, ‘ಗೀತಗಾಯನ’ ಸ್ಪರ್ಧೆಯಲ್ಲಿ ವಾಣಿ ಆಂಗ್ಲ ಮಾಧ್ಯಮ ಶಾಲೆ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸ್ಕೌಟ್ ವಿಭಾಗದಲ್ಲಿ ಪ್ರಥಮ ಸ್ಥಾನ, ಗೈಡ್ ವಿಭಾಗದಲ್ಲಿ ದ್ವಿತೀಯ ಸ್ಥಾನ, ಕಬ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಮತ್ತು ಬುಲ್ ಬುಲ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಪ್ರಥಮ ಸ್ಥಾನವನ್ನು ಪಡೆದುಕೊಂಡ ಸ್ಕೌಟ್ ತಂಡವು ಜಿಲ್ಲಾ ಮಟ್ಟದ ಗೀತಗಾಯನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
Home ಇತ್ತೀಚಿನ ಸುದ್ದಿಗಳು ಸ್ಕೌಟ್/ಗೈಡ್, ಕಬ್/ಬುಲ್ ಬುಲ್ ‘ಗೀತಗಾಯನ’ ಸ್ಪರ್ಧೆಯಲ್ಲಿ ವಾಣಿ ಆಂಗ್ಲ ಮಾಧ್ಯಮ ಶಾಲೆಗೆ ಪ್ರಶಸ್ತಿಗಳು, ಜಿಲ್ಲಾ ಮಟ್ಟಕ್ಕೆ...