ಕೊಕ್ಕಡ: ರಿಫಾಯಿಯ ಸುನ್ನಿ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಕೊಕ್ಕಡ: ಆ. 15ರಂದು 79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಬದ್ರಿಯಾ ನಗರ ಬೋಳದ ಬೈಲ್ ಎಸ್.ಕೆ.ಎಸ್.ಎಸ್.ಎಫ್ & ಎಸ್.ಕೆ.ಎಸ್.ಬಿ.ವಿ. ವತಿಯಿಂದ ದ್ವಜಾರೋಹಣ ಕಾರ್ಯಕ್ರಮ ರಿಫಾಯಿಯ ಸುನ್ನಿ ಜುಮಾ ಮಸೀದಿ ಆವರಣದಲ್ಲಿ ನಡೆಯಿತು. ನಂತರ ಬೋಳದಬೈಲ್ ಬಸ್ಟ್ಯಾಂಡ್ ಬಳಿ ಧ್ವಜಾರೋಹಣವನ್ನು ನಿರ್ವಹಿಸಲಾಯಿತು. ಮಸೀದಿ ಅಧ್ಯಕ್ಷ ಅಶ್ರಫ್ ಬಿ.ಕೆ. ಹಾಗೂ ಆಡಳಿತ ಸಮಿತಿ ಸದಸ್ಯರು ಧ್ವಜಾರೋಹಣ ನಿರ್ವಹಿಸಿದರು.

ಮಸೀದಿ ಧರ್ಮಗುರು ಮುಸ್ತಫ ಫೈಝಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯ ಅತಿಥಿಗಳನ್ನು, ಊರ ಪರ ಊರ ಗಣ್ಯರನ್ನು ವಿದ್ಯಾರ್ಥಿಗಳನ್ನು ಸ್ವಾಗತಿಸಿ ಸ್ವಾತಂತ್ರ್ಯ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದೀಪಕ್ ರಾಜ್ ಪಿಡಿಒ ಗ್ರಾಮ ಪಂಚಾಯತ್ ಕೊಕ್ಕಡ ವಿಲ್ ಫ್ರೈಡ್ ಪಿಂಟೋ ಸಿ.ಆರ್.ಪಿ. ಹಿರಿಯ ಪ್ರಾಥಮಿಕ ಶಾಲೆ ಕೊಕ್ಕಡ, ಗಣೇಶ್ ಪ್ರಸಾದ್ ಅಂಬಿಕಾ ಕ್ಲಿನಿಕ್ ಕೊಕ್ಕಡ, ಮ್ಯಾಕ್ಸಿ ಪಿಂಟೋ ಬೋಳದ ಬೈಲ್, ಕುವೆಲೋ ಡಿಸೋಜ, ಪ್ರಕಾಶ್ ರೈ ಪಟ್ಲಡ್ಕ, ಮುನೀರ್ ಎಮ್.ಎಚ್.‌ ಉದ್ಯಮಿ ಕೊಕ್ಕಡ ಅವರು ಸ್ವಾತಂತ್ರ್ಯ ಸಂದೇಶ ನೀಡಿ ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಬಂದ ಎಲ್ಲಾ ಅತಿಥಿಗಳನ್ನು ಸಾಲು ಹೊದಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಡಲಾಯಿತು. ಕೊಲಾಜ್, ನಿರ್ಮಾಣ, ದೇಶ ಭಕ್ತಿ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಕೊಲಾಜ್ ಪ್ರಥಮ ಸ್ಥಾನ ಗಳಿಸಿದ ಇರ್ಫಾನ್ 9ನೇ ತರಗತಿ, ದ್ವಿತೀಯ ಸ್ಥಾನ ಪಡೆದ ರಿಫಾ 7ನೇ ತರಗತಿ, ದೇಶಭಕ್ತಿ ಗೀತೆ ಪ್ರಥಮ ಇಹ್ಸಾನ್, ಅಫ್ರಾಹ್ 6ನೇ ತರಗತಿ ದ್ವಿತೀಯ ಸ್ಥಾನ ಪಡೆದ ಇಶ್ಮ, ಇಫ್ರಾ 5ನೇ ತರಗತಿ ವಿದ್ಯಾರ್ಥಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕಾರ್ಯಕ್ರಮದಲ್ಲಿ ಬೋಳದ ಬೈಲ್ ರಿಫಾಯಿಯ್ಯ ಜುಮಾ ಮಸೀದಿಯ ಅದ್ಯಕ್ಷರಾದ ಅಶ್ರಫ್ ಬಿ.ಕೆ. ಸ್ಥಳೀಯ ಅಧ್ಯಾಪಕ ಖಾಸಿಂ ಮುಸ್ಲಿಯಾರ್ ವಾಲೆಮುಂಡೋವು, ಎಸ್‌,ಕೆ.ಎಸ್.ಎಸ್.ಎಫ್. ಅದ್ಯಕ್ಷ ಹಾರಿಸ್ ಬಿ.ಕೆ., ಮುಖ್ಯ ಕಾರ್ಯದರ್ಶಿ ಅಬೂಬಕ್ಕರ್, ಮಾಜಿ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಹಾಗೂ ಊರಿನ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಸಿಹಿ ತಿಂಡಿ ಕೊಟ್ಟು ಸಹಕರಿಸಿದ ಮ್ಯಾಕ್ಸಿ ಪಿಂಟೋ ಪ್ರಕಾಶ್ ರೈ ಪಟ್ಲಡ್ಕ ಹಾಗೂ ಪಾನೀಯ ಕೊಟ್ಟು ಸಹಕರಿಸಿದ ಹೇಮಂತ್ ಕುಮಾರ್ ಅವರನ್ನು ಅಭಿನಂದಿಸಿದರು.. ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು

LEAVE A REPLY

Please enter your comment!
Please enter your name here