ಕಳಿಯ: ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಜು. 19ರಂದು ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಂ. ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಮಾರ್ಗದರ್ಶಿ ಅಧಿಕಾರಿಯಾಗಿ ವಲಯ ಅರಣ್ಯಾಧಿಕಾರಿ ಲೋಕೇಶ್ ಸಭೆಯನ್ನು ಮುನ್ನಡೆಸಿದರು. ಪಂಚಾಯತ್ ಉಪಾಧ್ಯಕ್ಷೆ ಇಂದಿರಾ ಬಿ., ಪಂಚಾಯತ್ ಸದಸ್ಯರಾದ ಸುಭಾಷಿನಿ, ಕುಸುಮ ಎಸ್. ಬಂಗೇರ, ಶಕುಂತಳಾ, ಮರೀಚಾ ಪಿಂಟೋ, ಶ್ವೇತಾ, ಸುಧಾಕರ, ಯಶೋಧರ ಶೆಟ್ಟಿ, ಅಬ್ದುಲ್ ಕರೀಂ, ಹರೀಶ್ ಕುಮಾರ್, ಪುಷ್ಪಾ, ಅಬ್ದುಲ್ ಲತೀಫ್ , ವಿಜಯ್ ಕುಮಾರ್, ಮೋಹಿನಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್ ಸ್ವಾಗತಿಸಿ, ಧನ್ಯವಾದವಿತ್ತರು.