
ಬೆಳ್ತಂಗಡಿ: ನರ್ಸಿಂಗ್ ಕ್ಷೇತ್ರದಲ್ಲಿ ಬೆಳ್ತಂಗಡಿಯ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ವಿದ್ಯಾಭ್ಯಾಸ ಹಾಗೂ ಉದ್ಯೋಗವಕಾಶವನ್ನು ಒದಗಿಸುತ್ತಿರುವ ಕಲ್ಪತರು ಸ್ಕೂಲ್ ಆಫ್ ನರ್ಸಿಂಗ್ ನಲ್ಲಿ ನ್ಯೂಟ್ರಿಷನಲ್ ಪ್ರೋಗ್ರಾಮ್ ಹೆಲ್ತ್ ಬೈಟ್ 2K25 ಕಾರ್ಯಕ್ರಮವು ಜು.17ರಂದು ಕಲ್ಪತರು ಸಭಾಂಗಣದಲ್ಲಿ ಜರುಗಿತು.

ಎಸ್.ಡಿ.ಎಮ್. ಆಸ್ಪತ್ರೆಯ ಆಹಾರ ತಜ್ಞೆ ಅನ್ವೇಷ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಪ್ರಥಮ ವರ್ಷದ ಜೆ.ಎನ್.ಎಮ್. ವಿದ್ಯಾರ್ಥಿಗಳಿಂದ ಹ್ಯಾಪಿ ಟಮ್ಮಿ, ವೆಲ್ನೆಸ್ ವಾರಿಯರ್ಸ್ ಮತ್ತು ಮೆಟಾ ಬಜ್ ಎಂಬ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗರ್ಭಾವಸ್ಥೆಯಲ್ಲಿ ಪಾಲಿಸಬೇಕಾದ ಆರೋಗ್ಯಕರ ಆಹಾರ ಕ್ರಮ, ನೈಸರ್ಗಿಕವಾಗಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಪಾಲಿಸಬೇಕಾದ ಆಹಾರ ಕ್ರಮ ಮತ್ತು ಮಧುಮೇಹ ಇರುವ ವ್ಯಕ್ತಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಆಹಾರದ ಪದ್ಧತಿಯ ಬಗ್ಗೆ ಮಾಹಿತಿ ನೀಡಲಾಯಿತು.

ಕಾಲೇಜಿನ ಚೇರ್ ಮ್ಯಾನ್ ಫಾದರ್ ಜೋಸೆಫ್ ವಲಿಯಪರಾಂಬಿಲ್, ಆಡಳಿತ ಅಧಿಕಾರಿ ಸಿಲ್ಜನ್ ಜಾರ್ಜ್, ಪ್ರಾಂಶುಪಾಲೆ ಚಂದ್ರಿಕಾ, ಸಿಬ್ಬಂದಿ ವರ್ಗ ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.