ನಾವೂರು: ಜು. 6ರಂದು ಸರ್ವೋದಯ ಟ್ರಸ್ಟ್ ನಾವೂರು ಇದರ ನೇತೃತ್ವದಲ್ಲಿ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಬೆಳ್ತಂಗಡಿ, ರೋಟರಿ ಕ್ಲಬ್ ಬೆಳ್ತಂಗಡಿ, ಪ್ರಸನ್ನ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆ ಲಾಯಿಲ, ಬಾಹುಬಲಿ ಕ್ರೆಡಿಟ್ ಸೌಹಾರ್ದ ಪತ್ತಿನ ಸಹಕಾರಿ ಸಂಘ ಕಾರ್ಕಳ, ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ ಬಂಗಾಡಿ ಇವರ ಸಹಭಾಗಿತ್ವದಲ್ಲಿ ರಕ್ತನಿಧಿ ಕೇಂದ್ರ ಕೆ.ಎಂ.ಸಿ ಇದರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಯಿತು.
ಶಿಬಿರದ ಉದ್ಘಾಟನೆಯನ್ನು ಬೆಳ್ತಂಗಡಿಯ ಶಾಸಕರಾದ ಮಾನ್ಯ ಹರೀಶ್ ಪೂಂಜ ಇವರು ನಡೆಸಿ ಕೊಟ್ಟು ಇಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಶಿಬಿರದ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ಮಾನ್ಯ ಶಾಸಕ ಪ್ರತಾಪ ಸಿಂಹ ನಾಯಕ್, ರೋಟರಿ ಕ್ಲಬ್ ನ ಅಧ್ಯಕ್ಷ ರೊ।ಪ್ರಕಾಶ್ ಪ್ರಭು, ಕಾರ್ಯದರ್ಶಿಗಳಾದ ರೊ।ಡಾ।ಎಂ.ಎಂ. ದಯಾಕರ್, ನಿಕಟ ಪೂರ್ವ ಅಧ್ಯಕ್ಷ ರೊ।ಪೂರಣ್ ವರ್ಮ, ನಿಕಟ ಪೂರ್ವ ಕಾರ್ಯದರ್ಶಿಗಳಾದ ರೊ। ಸಂದೇಶ್ ರಾವ್, ಎಕ್ಸೆಲ್ ಸಂಸ್ಥೆಯ ಅಧ್ಯಕ್ಷ ರೊ। ಸುಮಂತ್ ಕುಮಾರ್ ಜೈನ್, ರಾಜಶೇಖರ ಅಜ್ರಿ, ಶಿವರಾಜ ಪಜಿಲ, ಶ್ರಾವ್ಯ, ಕವಿತಾ, ಹೋಲಿ ಕ್ರಾಸ್ ಚರ್ಚ್ ಮಂಜೊಟ್ಟಿಯ ಧರ್ಮಗುರು ಫಾ। ಪೌಲ್ ಸೆಬಾಸ್ಟಿನ್, ನಾವೂರು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಸುನಂದ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ಹರೀಶ್ ಸಾಲ್ಯನ್ ಮೊರ್ತಾಜೆ, ಲಕ್ಷ್ಮಣ ಗೌಡ ಇರ್ತಿಲಾಲ್, ಎ.ಬಿ. ಉಮೇಶ್ ಅತ್ಯಡ್ಕ, ಎಸ್. ಎನ್. ಭಟ್ ಬೊಳಿಯಂಜಿ, ಸೇವಿಯರ್ ಪಾಲೇಲಿ, ಸುನಿಲ್ ನಾವೂರು, ಮುನಿರಾಜ ಅಜ್ರಿ, ಹಬೀಬ್ ಸಾಹೇಬ್ ನಡ, ಗಣೇಶ್ ಕಣಾಲು, ವೇದಾವತಿ ನಾವೂರು, ಪ್ರಿಯಾ ಸಂಪಿಂಜ, ಹಸ್ಸೈನಾರ್ ನಾವೂರು, ಉಮೇಶ್ ಪ್ರಭು, ಮೋಹನ್ ಕಾರಿಂಜ, ಅಜಿತ್ ಆರಿಗ, ಮುಖ್ಯ ಶಿಕ್ಷಕಿ ರೋಹಿಣಿ, ರಾಜೇಂದ್ರ ಮುಖ್ಯ ಶಿಕ್ಷಕರು, ಪ್ರವೀಣ್ ವಿ.ಜಿ., ಗ್ರಾಮಾಭಿವೃದ್ಧಿ ಯೋಜನೆಯ ಉಷಾ ಬೆಳಾಲು, ಜನಾರ್ದನ ಕಡ್ತ್ಯಾರು, ದರ್ಣಪ್ಪ ಮೂಲ್ಯ, ದಿನೇಶ್ ಪ್ರಭು, ಗಣೇಶ್ ಗೌಡ ಹಾಗೂ ಸೆಬಾಸ್ಟಿನ್ ವಿ.ಪಿ.ಭಾಗವಹಿಸಿದರು.

ಸಹಕಾರ ನೀಡಿದ ಸಂಘ ಸಂಸ್ಥೆಗಳ ಪ್ರಮುಖರಾದ ಶ್ಯಾಮ ಭಟ್ ಅತ್ತಾಜೆ, ಅಶ್ವತ್ಥ ಭಟ್ ಪಡ್ಪು, ಹನೀಫ್ ಕೇಲ್ತಾಜೆ, ಶಾಹುಲ್ ನಾವೂರು, ಜಯಾನಂದ ಗೌಡ, ಉಮೇಶ್ ಮಾಲೂರು, ತೀಕ್ಷಿತ್ ದಿಡುಪೆ, ರಮೇಶ್ ನೂಜಿಲೆ, ರಾಮಣ್ಣ ಕುಂಬಾರ, ಲೋಕೇಶ್ ಕುಕ್ಕಾವು, ಹರೀಶ್ ಮಾಂಜ್ಯ, ಪ್ರಕಾಶ್ ಇಜ್ಜಲ, ಪ್ರಮೋದ್ ಗೌಡ ಬೆದ್ರಬೆಟ್ಟು ಮುಂತಾದವರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಅಧ್ಯಕ್ಷ ನೇಮಿರಾಜ ಆರಿಗ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಂಚಾಲಕ ಡಾ। ಪ್ರದೀಪ್ ಆಟಿಕುಕ್ಕೆ ಸ್ವಾಗತಿಸಿದರು. ಶಿಬಿರದಲ್ಲಿ 201 ಯುನಿಟ್ ರಕ್ತ ಸಂಗ್ರಹಿಸಲ್ಪಟ್ಟಿರುತ್ತದೆ. ಹರೀಶ್ ಕಾರಿಂಜ ಸ್ವಾಗತಿಸಿ, ವಂದಿಸಿದರು.