ಮಂಜೊಟ್ಟಿ: ಹೋಲಿ ಕ್ರಾಸ್ ಚರ್ಚ್ ನಲ್ಲಿ ಜು. 7ರಂದು ಸರಿಯಾಗಿ “ಲಾವ್ದಾತೊ ಸಿ ಭಾನುವಾರ -2025”- ಪರಿಸರ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚಿನ ಧರ್ಮಗುರು ಫಾ| ಪಾವ್ಲ್ ಸೆಬಾಸ್ಟಿಯನ್ ಡಿಸೋಜ ಅವರು ವಹಿಸಿ, ಸಾಂಕೇತಿಕ ರೀತಿಯಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, “ಪ್ರತಿಯೊಬ್ಬರು ಪ್ರಕೃತಿ- ಸಂಮೃದ್ದಿಯ ಕಡೆಗೆ ತಮ್ಮ ಕೊಡುಗೆಯನ್ನು ನೀಡಬೆಕೇಂದು ಕರೆ ನೀಡಿದರು.”
ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಮಾರ್ಕ್ ಡಿಸೋಜ, ಹಾಗೂ ಕಾರ್ಯದರ್ಶಿ ಐರಿನ್ ಸಿಕ್ವೇರಾ, 21 ಆಯೋಗದ ಸಂಯೋಜಕ ವಿನೋದ್ ಪಿಂಟೊ, ಪರಿಸರ ಆಯೋಗದ ಸಂಚಾಲಕ ಲ್ಯಾನ್ಸಿ ಲೋಬೊ, ಕಥೊಲಿಕ್ ಸಭಾ ಅಧ್ಯಕ್ಷ ಕ್ಲೇವಿನ್ ಮಿರಾಂದಾ ಮತ್ತು ಐಸಿವೈಮ್ ಸಂಘಟನೆಯ ಸದಸ್ಯರು ಹಾಜರಿದ್ದು ಎಲ್ಲರ ಸಹಯೋಗದೊಂದಿಗೆ ಕಾರ್ಯಕ್ರಮ ನೆರವೇರಿತು.
ಈ ದಿನದ ಪ್ರಮುಖ ಭಾಗವಾಗಿ “ಮನೆಗೊಂದು ಗಿಡ, ಕುಟುಂಬಕ್ಕೊಂದು ಮರ” ಎಂಬ ಧ್ಯೇಯವಾಕ್ಯದೊಂದಿಗೆ ಪ್ರತೀ ಕುಟುಂಬಕ್ಕೊಂದು ಹಲಸು, ಹೆಬ್ಬಲಸು, ನೇರಳೆ, ಪುನರ್ಪಳಿ ಮತ್ತು ರಂಬುಟನ್ ಹೀಗೆ ವಿವಿಧ ಜಾತಿಯ ಗಿಡಗಳನ್ನು ವಿತರಿಸಲಾಯಿತು.