ನೆರಿಯ ಗ್ರಾಮ ಪಂಚಾಯತ್ ಮುಂದೆ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

0

ನೆರಿಯ: ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 2 ವರ್ಷಗಳಾದರೂ ಸುಸೂತ್ರವಾಗಿ ಆಡಳಿತ ನಡೆಸದೆ ಭೂಮಾಫಿಯ, ಪಟ್ಟಭದ್ರ ಹಿತಾಸಕ್ತಿಗಳಿಂದ ಜನರಿಗೆ ಸುಲಭ ರೀತಿಯ ಸೇವೆ ದೊರಕದೆ ಭಷ್ಟಚಾರದ ಕೂಪದಿಂದ ಸ್ರೀ ಸಾಮಾನ್ಯರ ಹಣ ದೋಚಲು ಅವೈಜ್ಞಾನಿಕ ನಿಯಮ ರೂಪಿಸಿ ಅಲೆದಾಟದ ಭಾಗ್ಯ ಒದಗಿಸಿರುವುದನ್ನು ಹಾಗೂ

9/11 ನಿವೇಶನಗಳ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ, ಅಕ್ರಮ ಸಕ್ರಮ ತಿರಸ್ಕರಿಸುವುದನ್ನು ಖಂಡಿಸಿ, ಬಡವರ ಅಶ್ರಯ ಮನೆಗಳ ಮಂಜೂರಾತಿ ಮತ್ತು ಅನುದಾನ ಬಿಡುಗಡೆಗೆ ಒತ್ತಾಯಿಸಿ, ವೃದ್ಯಾಪ ವೇತನ, ಸಂಧ್ಯಾ ಸುರಕ್ಷಾ ಹಣ ಬಿಡುಗಡೆಗೆ ಒತ್ತಾಯಿಸಿ, ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಿದ್ದನ್ನು ವಿರೋಧಿಸಿ, ವಿದ್ಯುತ್ ದರ ಏರಿಕೆಯನ್ನು ಖಂಡಿಸಿ, ಗೃಹ ನಿರ್ಮಾಣಕ್ಕೆ ಪೂರಕವಾದ ಮರಳು ಹಾಗೂ ಕೆಂಪುಕಲ್ಲು ಸಾಗಾಣಿಕೆ ನಿರ್ಬಂಧ ರದ್ದತಿಗೆ ಆಗ್ರಹಿಸಿ, ಭಾರತೀಯ ಜನತಾ ಪಾರ್ಟಿ ಗ್ರಾ. ಪಂಚಾಯತ್ ಮುಂದೆ ಜೂ.23ರಂದು ಪ್ರತಿಭಟನೆ ನಡೆಸಿದರು.

ಉಜಿರೆ ಶಕ್ತಿ ಕೇಂದ್ರ ಬಾಬು ಗೌಡ ಪರ್ಪಳ, ಗ್ರಾಮ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ, ವಿ. ಹಿಂ. ಪ. ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಮುಂಡಾಜೆ ಕ್ರ. ಪ. ಸ. ಸಂಘದ ಅಧ್ಯಕ್ಷ ಪ್ರಕಾಶ್ ನಾರಾಯಣ್ ರಾವ್, ನಿರ್ದೇಶಕ ಅಜಯ್, ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ, ಉಪಾಧ್ಯಕ್ಷೆ ಸಜಿತಾ, ಸದಸ್ಯರಾದ ಮಾಲತಿ, ಸವಿತಾ, ದಿನೇಶ, ವಿ. ಹಿಂ. ಪ. ಗ್ರಾಮ ಸಮಿತಿ ಅಧ್ಯಕ್ಷ ಮಹೇಶ್ ಗೌಡ, ಪ್ರಕಾಶ್ ನೆಕ್ಕರೆ ಪ್ರತಿಭಟನೆಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here