ವೇಣೂರು: ಕರಿಮಣೇಲು ಗ್ರಾಮದ ಗುತ್ತು ರಾಮಣ್ಣ ಪೂಜಾರಿ (75ವರ್ಷ) ಹೃದಯಾಘಾತದಿಂದ ಮೇ. 7ರಂದು ನಿಧನರಾದರು. ಇವರು ಪತ್ನಿ ಪುಷ್ಪ, ಪುತ್ರ ಪ್ರಶಾಂತ್ ಪೂಜಾರಿ, ಪುತ್ರಿಯರಾದ ಪ್ರಮೀಳಾ, ಶೋಭಾ, ಮೊಮ್ಮಕ್ಕಳನ್ನು ಅಗಲಿದ್ದಾರೆ. ಇವರು ಕೃಷಿಕರಾಗಿದ್ದು ಭಾರತೀಯ ಜನತಾ ಪಕ್ಷದ ಕರಿಮಣೇಲು ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.