ಶಿಶಿಲ: ಗ್ರಾ. ಪಂ. 2024-25ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷ ಸುಧೀನ್ ಡಿ. ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನೋಡೆಲ್ ಅಧಿಕಾರಿಯಾಗಿ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹೇಮಲತಾ ಸಮ್ಮುಖದಲ್ಲಿ ನಡೆಯಿತು.

ವಿವಿಧ ಇಲಾಖೆಯ ಅಧಿಕಾರಿಗಳು ಆಗಮಿಸಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು. ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷ ಸುಧೀನ್ ಡಿ., ಮಾರ್ಗದರ್ಶಿ ಅಧಿಕಾರಿ ಹೇಮಲತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಎಂ., ಪಂಚಾಯತ್ ಸದಸ್ಯರುಗಳಾದ ಲಲಿತ ಮತ್ತು ಚೆನ್ನಕ್ಕ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಎಂ. ಸ್ವಾಗತಿಸಿದರು. ವರದಿ ಹಾಗೂ ಧನ್ಯವಾದವನ್ನು ಪಂಚಾಯತ್ ಸಿಬ್ಬಂದಿ ಸುಂದರ ಎಂ. ಕೆ. ನೆರವೇರಿಸಿದರು.