ಬೆಳ್ತಂಗಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 16ನೇ ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ.
ಸಂವಿಧಾನಿಕ ನೆಲೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿ ಸರ್ವರನ್ನೂ ಒಂದಲ್ಲ ಒಂದು ರೀತಿಯಲ್ಲಿ ತಲುಪಬಲ್ಲ ಯೋಜನೆಗಳು ಘೋಷಿಸಲ್ಪಟ್ಟಿದೆ.
ರಸ್ತೆ,ಸಣ್ಣ ನೀರಾವರಿ,ಸಾರಿಗೆ ಸಂಪರ್ಕ,ಮಹಿಳಾ ಸಬಲೀಕರಣ, ಪ್ರವಾಸೋದ್ಯಮ ಅಭಿವೃದ್ಧಿ,ಗ್ರಾಮೀಣಾಭಿವೃದ್ಧಿ,ಅತಿಥಿ ಶಿಕ್ಷಕರ,ಆಶಾ ಕಾರ್ಯಕರ್ತೆಯರ, ಬಿಸಿಯೂಟ ಸಿಬ್ಬಂದಿಗಳ ಗೌರವಧನ ಹೆಚ್ಚಳ,ಕಾರ್ಮಿಕ ಸುರಕ್ಷತಾ ಯೋಜನೆಗಳಿಗೆ ಆಧ್ಯತೆ ನೀಡಲಾಗಿದೆ.
ವಿಶೇಷವಾಗಿ ದೇಶದಲ್ಲೇ ಮಾದರಿ ಯೋಜನೆ ಎನಿಸಿರುವ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಮತ್ತಷ್ಟು ಆರ್ಥಿಕ ಚೈತನ್ಯ ಒದಗಿಸಿ ಪರಿಣಾಮಕಾರಿಯಾಗಿ ಮುನ್ನಡೆಸಲು ಸರ್ಕಾರ ದೃಢ ಸಂಕಲ್ಪ ಮಾಡಿದೆ. ಯೋಜಿತ ಗುರಿ ಉದ್ದೇಶಗಳನ್ನು ಒಳಗೊಂಡ ಬಜೆಟ್ ಮಂಡನೆಗೈದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕರ್ನಾಟಕದ ಜನತೆಯಿಂದ ಅಭಿನಂದನಾರ್ಹರು ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವಕ್ತಾರ ಸಂದೀಪ್ ಎಸ್. ನೀರಲ್ಕೆ ಅರ್ವ ಅಭಿಪ್ರಾಯಪಟ್ಟರು.