ಮುಂಡೂರು ಶ್ರೀ ಕ್ಷೇತ್ರ ಮಂಗಳಗಿರಿಯಲ್ಲಿ ಕಾಲಾವಧಿ ನೇಮೋತ್ಸವ

0

ಮುಂಡೂರು: ಶ್ರೀ ಕ್ಷೇತ್ರ ಮಂಗಳಗಿರಿ ಶ್ರೀ ನಾಗಕಲ್ಲುರ್ಟಿ ದೈವಸ್ಥಾನದಲ್ಲಿ ಫೆ. 12ರಿಂದ 13ರವರೆಗೆ ಶ್ರೀ ದೇವಿ ನಾಗಾಂಬಿಕಾ ಅಮ್ಮನವರ ಉತ್ಸವ ಬಲಿ ಮತ್ತು ಶ್ರೀ ವರಾಹಿ ಮಂತ್ರಮೂರ್ತಿ,
ನಾಗಕಲ್ಲುರ್ಟಿ ಸತ್ಯದೇವತೆ, ಕೊರಗಜ್ಜ ಮತ್ತು ಶ್ರೀ ಗುಳಿಗರಾಜ ದೈವಗಳ ಕಾಲಾವಧಿ ನೇಮೋತ್ಸವವು ಜರಗಿತು.

ಫೆ .12ರಂದು ಬೆಳಿಗ್ಗೆ ಪ್ರಾರ್ಥನೆ, ಸ್ಥಳ ಶುದ್ಧಿ, ಪುಣ್ಯಹವಾಚನ, ಗಣಹೋಮ, ನಾಗಬ್ರಹ್ಮ ದೇವರಿಗೆ ತನುತಂಬಿಲ, ಆಶ್ಲೇಷಬಲಿ, ದೈವಗಳಿಗೆ ಪಂಚಪರ್ವ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ
ಸಂಜೆ ಉದ್ಬವ ಗಣಪತಿಗೆ / ಶ್ರೀ ನಾಗಾಂಬಿಕಾ ಅಮ್ಮನವರಿಗೆ ಜೋಡು ರಂಗಪೂಜೆ, ರಾತ್ರಿ ಕ್ಷೇತ್ರದ ಭಕ್ತಿಗೀತೆ ಧ್ವನಿ ಸುರುಳಿ ಬಿಡುಗಡೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆದು ರಾತ್ರಿ ಡೆನ್ನಾನ ಕಲಾವಿದರು ಕಾರ್ಕಳ ಇವರಿಂದ ತುಳು ನಾಟಕ” ಡೆನ್ನಾನ ” ನಡೆಯಿತು.

ಫೆ.13ರಂದು ಬೆಳಿಗ್ಗೆ ಮಹಾಪೂಜೆ ಪ್ರಸಾದ ವಿತರಣೆ ರುದ್ರಯಾಗ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ ಪ್ರಸಾದ ವಿತರಣೆ, ಸಂಜೆ ಮಹಾಪೂಜೆ, ಶ್ರೀ ದೇವಿ ನಾಗಾಂಬಿಕಾ ಅಮ್ಮನವರ ಉತ್ಸವ ಬಲಿ, ಶ್ರೀ ನಾಗಾಂಭಿಕ ಭಜನಾ ಮಂಡಳಿ ಇವರಿಂದ ಕುಣಿತ ಭಜನಾ ಕಾರ್ಯಕ್ರಮ, ರಾತ್ರಿ ಭಂಡಾರ ಇಳಿದು, ದೈವಗಳ ಶ್ರೀ ನಾಗಾಂಬಿಕಾ ಅಮ್ಮನವರ ಭೇಟಿ, ಅನ್ನಪ್ರಸಾದ, ರಾತ್ರಿ ದೈವಗಳ ನೇಮೋತ್ಸವ, ಕೊರಗಜ್ಜ ಕೋಲ, ಬೆಳಿಗ್ಗೆ ಗುಳಿಗ ದೈವದ ಕೋಲ ನಡೆಯಿತು. ಕ್ಷೇತ್ರದ ಧರ್ಮದರ್ಶಿ, ಸಮಿತಿ ಪದಾಧಿಕಾರಿಗಳು, ಸದಸ್ಯರು, ಊರವರು, ಭಕ್ತರು ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here