ಧರ್ಮಸ್ಥಳ: ಗ್ರಾಮದ ನಾರ್ಯ ಕಾಣಮೇರು ನಿವಾಸಿ ಪ್ರಶಾಂತ್ ಗೌಡ(25) ಅಲ್ಪಕಾಲದ ಅಸೌಖ್ಯದಿಂದ ಫೆ.17ರಂದು ನಿಧನರಾದರು.
ಮುಂಜಾನೆ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡ ಇವರನ್ನು ತಕ್ಷಣ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗಿದೆ ಸಂಜೆ ಮೃತಪಟ್ಟಿದ್ದಾರೆ.
ಮೃತರು ತಂದೆ ಭೀಮ, ತಾಯಿ ಬಾಬಿಯವರನ್ನು ಅಗಲಿದ್ದಾರೆ.