ಕಕ್ಯಪದವು: ಎಲ್. ಸಿ. ಆರ್. ವಿದ್ಯಾಸಂಸ್ಥೆಯಲ್ಲಿ ಜ. 10 ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ವಿಜೃಂಭನೆಯಿಂದ ನಡೆಯಿತು. ಡಾ . ರವಿ ಸುಬ್ರಮಣ್ಯ, ಅಧ್ಯಕ್ಷರು ಇಂಟರ್ನ್ಯಾಷನಲ್ ಸೀನಿಯರ್ ಚೇಂಬರ್ ಸುಬ್ರಮಣ್ಯ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಸ್ಥೆಯ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿ ಬದುಕುವ ಶಿಕ್ಷಣ ಪ್ರತಿಯೊಂದು ಮಗುವಿಗೂ ಸಿಗಬೇಕು, ಸಾಧಿಸುವ ಹಠದೊಂದಿಗೆ ಸಾಧನೆ ಮಾಡುವ ಹಂಬಲ ವಿದ್ಯಾರ್ಥಿಗಳಿಗೆ ಬೇಕು ಎಂದರು.
ಮುಖ್ಯ ಅತಿಥಿ ಅಬ್ದುಲ್ ಸಲೀಮ್ ಹೆಚ್. ಹೆಡ್ ಕಾನ್ಸ್ಟೇಬಲ್ ಪುತ್ತೂರು, ಉಪಸ್ಥಿತರಿದ್ದು, ಅವಕಾಶ ಸಿಗದಿರುವುದು ಸೋಲಲ್ಲ ಸಿಕ್ಕಾ ಅವಕಾಶಗಳನ್ನ ಬಳಸದಿರುವುದು ಸೋಲು. ಊರಿನ ಪೋಷಕರು ಗ್ರಾಮೀಣ ಪ್ರದೇಶದ ಇಂತಹ ಸಂಸ್ಥೆಗೆ ಸದಾ ಋಣಿಯಾಗಿರಬೇಕು ಎಂಬ ಮಾತುಗಳಿಂದ ಶುಭ ಹಾರೈಸಿದರು. ಗೌರವ ಉಪಸ್ಥಿತರಿದ್ದ ಸಂಸ್ಥೆಯ ಕಾರ್ಯದರ್ಶಿ ಶಿವಾನಿ ರೋಹಿನಾಥ್ ಅಧ್ಯಕ್ಷೀಯ ನುಡಿಗಳೊಂದಿಗೆ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸರ್ವರ ಪ್ರಯತ್ನಕ್ಕೆ ಧನ್ಯವಾದ ಹೇಳಿದರು.
ಸಂಸ್ಥೆಯ ಟ್ರಸ್ಟಿ ಯಜ್ಞೇಶ್ ರಾಜ್ ಗೌರವ ಉಪಸ್ಥಿತಿಯಲ್ಲಿ ಮಾತಾಡಿ, ಸಂಸ್ಥೆಯು ಮಹಿಳೆಯರಿಂದ ನಡೆಯಲ್ಪಡುತ್ತಿದ್ದು, ಇದು ಎಲ್ಲಾ ಹೆಣ್ಣು ಮಕ್ಕಳಿಗೂ ಸ್ಪೂರ್ತಿಯಾಗಬೇಕು. ಜೊತೆಗೆ ಶ್ರಮಪಟ್ಟರೆ ಸಾಧಿಸಲು ಸಾಧ್ಯ ಎಂಬ ಹಿತನುಡಿಗಳಿಂದ ಪ್ರೇರಣಾತ್ಮಕ ಮಾತುಗಳನ್ನಾಡಿದರು.
ಸಂಸ್ಥೆಯ ಸಂಚಾಲಕ ಬಬಿತಾ. ಆರ್. ನಾಥ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಜೋಸ್ಟನ್ ಲೋಬೋ, ಸಂಯೋಜಕ ಯಶವಂತ ಜಿ. ನಾಯಕ್, ಮುಖ್ಯೋಪಾಧ್ಯಾಯಿನಿ ವಿಜಯಾ. ಕೆ ಉಪಸ್ಥಿತರಿದ್ದರು. ದಶಮಾನೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಮತ್ತು ಕ್ರೀಡಾ ಚಟುವಟಿಕೆಗಳ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕನ್ನಡ ಉಪನ್ಯಾಸಕಿ ವಿಂದ್ಯಾಶ್ರೀ ಸ್ವಾಗತಿಸಿ , ಸಹಶಿಕ್ಷಕಿ ಪ್ರಿಯತ ವಂದಿಸಿ, ವಾಣಿಜ್ಯಶಾಸ್ತ ಉಪನ್ಯಾಸಕಿ ಚೈತ್ರ ಬಿ. ಮತ್ತು ಸಹಶಿಕ್ಷಕಿ ತೀರ್ಥಲತಾ ಕಾರ್ಯಕ್ರಮ ನಿರೂಪಿಸಿದರು.