ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ಹಾಗೂ ಬೆಳ್ತಂಗಡಿ ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಂಟಿ ಆಶ್ರಯದಲ್ಲಿ ಅ.16ರಂದು ಪಂಚಾಯತ್ ವಠಾರದಲ್ಲಿ ಪಂಚಾಯತ್ ಅಧ್ಯಕ್ಷ ದಿವಾಕರ ಎಂ.ಲಸಿಕೆಯನ್ನು ಪಶುವೈದ್ಯ ಡಾ.ರವಿ ಕುಮಾರ್ ಅವರಿಗೆ ಹಸ್ತಾಂತರಿಸಿದರು.
ಭಾರತವನ್ನು ರೇಬೀಸ್ ರೋಗ ಮುಕ್ತವಾಗಿ ಮಾಡುವ ಉದ್ದೇಶದಿಂದ ಸರಕಾರವು ಕಾರ್ಯಕ್ರಮ ಹಮ್ಮಿಕೊಂಡಿದೆ. ಅದುದರಿಂದ ಸಾಕು ನಾಯಿಗಳು, ಬೀದಿ ನಾಯಿ ಮತ್ತು ಬೆಕ್ಕುಗಳ ಬೆಳ್ತಂಗಡಿ ತಾಲೂಕಿನಲ್ಲಿರುವ ಗ್ರಾಮ ಪಂಚಾಯತ್, ಸಂಘ, ಸಂಸ್ಥೆಗಳ ಸಹಭಾಗಿತ್ವದಲ್ಲಿ ಪಶು ಸಂಗೋಪನೆ ಇಲಾಖೆಯಿಂದ ಸಾರ್ವಜನಿಕರಲ್ಲಿ ಮತ್ತು ಶಾಲಾ, ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಿದೆ ಎಂದು ಬೆಳ್ತಂಗಡಿ ಪಶು ಸಂಗೋಪನೆ ಪಶುವೈದ್ಯ ಡಾ. ರವಿ ಕುಮಾರ್ ಹೇಳಿದರು.

ನಿವೃತ್ತ ಸೈನಿಕ ಸುಭ್ರಮಣಿ ಹಾಗೂ ಆಶೋಕ ಆಚಾರ್ಯ ಅವರ ನಾಯಿಗಳಿಗೆ ಸಾಂಕೇತಿಕವಾಗಿ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. ಸಾರ್ವಜನಿಕರ ಸಾಕು ನಾಯಿ,ಬೆಕ್ಕುಗಳಿಗೆ ಲಸಿಕೆ ಹಾಕಿಸಲು ಕಳಿಯದಲ್ಲಿ 7 ಮತ್ತು ನ್ಯಾಯತರ್ಪು ಗ್ರಾಮದಲ್ಲಿ 10 ಪ್ರಮುಖ ಕೇಂದ್ರಗಳನ್ನು ಗುರುತಿಸಿ,2 ವೈದ್ಯರ ತಂಡಗಳನ್ನು ಮಾಡಿದರು. ಸುಮಾರು 130 ಹೆಚ್ಚು ನಾಯಿ,ಬೆಕ್ಕುಗಳಿಗೆ ಲಸಿಕೆ ನೀಡಿದರು. ಪಶುಪಾಲನೆ ಇಲಾಖೆಯ ಸಿಬ್ಬಂದಿಗಳಾದ ಡಾ.ರಮೇಶ್. ಸಹಾಯಕ ಚಂದ್ರ ಕುಮಾರ್, ದೀರಾಜ್ ಪಶು ಸಖಿ ರೂಪಾ,ಪಂಚಾಯತ್ ಸಿಬ್ಬಂದಿಗಳಾದ ರವು ಹೆಚ್., ಸುರೇಶ್ ಗೌಡ ಹೆಚ್., ಸಿಬ್ಬಂದಿಗಳು ಮತ್ತಿತರರಿದ್ದರು.
ಕಳಿಯ ಗ್ರಾಮ ಪಂಚಾಯತ್ ಪ್ರಭಾರ ಪಿ.ಡಿ.ಓ.ಕುಂಞ ಕೆ. ನಿರೂಪಿಸಿ, ವಂದಿಸಿದರು.