ಉಜಿರೆ: ಅರಿಪ್ಪಾಡಿ ಮಠ ಕಾಂಪ್ಲೆಕ್ಸ್ ನಲ್ಲಿ ದಿಶಾ ಬೇಕರಿಯ ಹೊಸ ಶಾಖೆ ಶುಭಾರಂಭ

0

ಉಜಿರೆ: ದಿಶಾ ಬೇಕರಿಯ ಹೊಸ ಶಾಖೆ ಅರಿಪ್ಪಾಡಿ ಮಠ ಕಾಂಪ್ಲೆಕ್ಸ್ ನಲ್ಲಿ ಅ. 16 ವಿಶ್ವ ಆಹಾರ ದಿನದಂದು ಶುಭಾರಂಭಗೊಂಡಿತು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರ ಶರತ್ ಕೃಷ್ಣ ಪಡುವೆಟ್ನಾಯ ಉದ್ಘಾಟಿಸಿ ಮಾತನಾಡಿ ದಿಶಾ ಸಮೂಹ ಸಂಸ್ಥೆ ತಾಲೂಕಿನಲ್ಲಿ ಆಹಾರ ಉದ್ದಿಮೆಯಲ್ಲಿ ಹೊಸ ಆವಿಷ್ಕಾರ ಮೂಡಿಸಿದೆ. ಚಿಕ್ಕ ಸಂಸ್ಥೆಯಿಂದ ಪ್ರಾರಂಭವಾದ ದಿಶಾ ಸಂಸ್ಥೆ ದೊಡ್ಡದಾಗಿ ಬೆಳೆದು ಬೆಳೆಯುತ್ತಿರುವ ಉಜಿರೆಯಲ್ಲಿ ಗ್ರಾಹಕರಿಗೆ ಕಾಲಕ್ಕೆ ತಕ್ಕಂತೆ ಸ್ಪಂದಿಸುತ್ತಿದೆ.

ಉಜಿರೆ ಬಸ್ ನಿಲ್ದಾಣ ಬಳಿ ಪಾರ್ಕಿಂಗ್ ಸಮಸ್ಯೆ ಇದ್ದು ಈಗ ಪ್ರಾರಂಭವಾದ ಅಂಗ ಸಂಸ್ಥೆಯಿಂದ ಗ್ರಾಹಕರಿಗೆ ಆರಾಮವಾಗಿ ಅನುಕೂಲ ವಾಗಲಿದೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು. ಅರಿಪ್ಪಾಡಿ ಮಠ ಕಾಂಪ್ಲೆಕ್ಸ್ ಮಾಲಕ ಶ್ರೀನಿವಾಸ ಅರಿಪ್ಪಾಡಿತ್ತಾಯ, ಶ್ರೀಪತಿ ಆರಿಪ್ಪಾಡಿತ್ತಾಯ, ರಮ್ಯ ಶ್ರೀಪತಿ ಅರಿಪ್ಪಾಡಿತ್ತಾಯ, ಉಜಿರೆ ಅಶೋಕ ಭಟ್, ಗಿರೀಶ್ ಕುದ್ರ0ತಾಯ, ಬೆಳ್ತಂಗಡಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಅಧ್ಯಕ್ಷ ಪ್ರಶಾಂತ್ ರಾವ್, ಕಾರ್ಯದರ್ಶಿ ಜಯಪ್ರಕಾಶ್ ರಾವ್ ಇನ್ನಿತರ ಗಣ್ಯರು,ಗ್ರಾಹಕರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಉಜಿರೆ ದಿಶಾ ಗ್ರೂಪ್ಸ್ ನ ದಿವಾಕರ ರಾವ್, ಜಯಂತಿ ದಿವಾಕರ ರಾವ್, ಅರುಣ್ ಕುಮಾರ್ ಎಂ. ಎಸ್., ಹೇಮಲತಾ ಅರುಣ್ ಕುಮಾರ್, ದಿನೇಶ್ ಎಂ.ಎಸ್., ಸೀತಾಲಕ್ಷ್ಮಿ ದಿನೇಶ್ ರಾವ್, ಅಕ್ಷಯ್ ರಾವ್, ಸಾಗರಿಕ ಅಕ್ಷಯ್, ಶ್ರೀಧರ್ ರಾವ್ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು. ದಿನೇಶ್ ಕುಮಾರ್ ಎಂ. ಎಸ್. ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.

LEAVE A REPLY

Please enter your comment!
Please enter your name here