ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಸ್ಥಳ ವಲಯದ ಕಲ್ಮಂಜ ಕನ್ಯಾಡಿ ಕಾರ್ಯಕ್ಷೇತ್ರದ ನೀರಚಿಲುಮೆ ಒಕ್ಕೂಟದ ನವಶಕ್ತಿ ತಂಡದ ಸದಸ್ಯೆ ದಿವ್ಯ ಅವರ ತಂದೆ ಷಣ್ಮುಖ ಅವರಿಗೆ ತಮಿಳುನಾಡಿನಲ್ಲಿ ಕರ್ತವ್ಯದ ಸಂದರ್ಭದಲ್ಲಿ ಬೈಕ್ ಅಪಘಾತವಾಗಿ 2 ಕಾಲು ತೀವ್ರ ಗಾಯವಾಗಿದ್ದು, 1 ಕಾಲಿನ ತೊಡೆಯ ಭಾಗದಿಂದ ತುಂಡರಿಸಲಾಗಿದ್ದು, ಓಡಾಡಲು
ಅಸಾಧ್ಯವಾಗಿದೆ. 5 ಲಕ್ಷ ಚಿಕಿತ್ಸಾ ವೆಚ್ಚವಾಗಿದೆ.
ಮುಂದಿನ ಚಿಕಿತ್ಸೆಗಾಗಿ ಯೋಜನೆಯಿಂದ ಹೆಗ್ಗಡೆ ಅವರು ರೂ 30,000ಮೊತ್ತದ ಸಹಾಯ ಧನ ನೀಡಿದ್ದು ಇದರ ಮಂಜೂರಾತಿ ಪತ್ರವನ್ನು ಪಜೀರಡ್ಕ ದೇವಸ್ಥಾನದ ಮಾಜಿ ಅಧ್ಯಕ್ಷ ಕಲ್ಮoಜ ಗ್ರಾಮದ ಮಾಜಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್ ನೀಡಿದ್ದಾರೆ.
ನೀರಚಿಲುಮೆ ಒಕ್ಕೂಟದ ಅಧ್ಯಕ್ಷ ದಿವಾಕರ್, ಕೋಶಾಧಿಕಾರಿ ಮನೋರಾಮ, ಶೌರ್ಯ ತಂಡದ ಸದಸ್ಯರಾದ ರತ್ನಕರ ಗೌಡ, ಧರ್ಮಸ್ಥಳ ವಲಯದ ಮೇಲ್ವಿಚಾರಕ ರವೀಂದ್ರ, ಸೇವಾಪ್ರತಿನಿಧಿ ಪ್ರಮೀಳಾ, ಮತ್ತು ಮನೆಯವರು ಉಪಸ್ಥಿತರಿದ್ದರು.