ಕುವೆಟ್ಟು: ಇತಿಹಾಸ ಪ್ರಸಿದ್ಧವಾದ ಮದ್ದಡ್ಕ ತಾಯಿ ರಕ್ತೇಶ್ವರಿ ದೈವ ಮತ್ತು ಪಿಲಿಚಾಮುಂಡಿ ದೈವದ ದೈವಸ್ಥಾನದ ಜೀರ್ಣೋದ್ಧಾರದ ಕೆಲಸಕ್ಕೆ ಅ. 17ರoದು ಊರ ಭಕ್ತಾದಿಗಳಿoದ ಶ್ರಮದಾನ ಮಾಡುವ ಮೂಲಕ ಚಾಲನೆ ನೀಡಲಾಯಿತು. ಬೆಳಿಗ್ಗೆ ದೈವಸ್ಥಾನದ ಅಸ್ರಣ್ಣರಾದ ರಘುರಾಮ್ ಭಟ್ ಮಠ ಹಾಗೂ ಶ್ರೀನಿವಾಸ ಅಮ್ಮಣ್ಣಾಯ ಅವರ ಹಾಗೂ ಮೋಹನ್ ಭಟ್ ಮೈರಾರು ಉಪಸ್ಥಿತಿಯಲ್ಲಿ ರಾಘವೇಂದ್ರ ಭಟ್ ಮಠ ಮುoದಿನ ದಿನಗಳಲ್ಲಿ ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ನಡೆಯಲಿ ಎoದು ಪ್ರಾರ್ಥನೆ ಮಾಡಿದರು.
ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷೆ ಸುಜಿತಾ ವಿ. ಬಂಗೇರ, ಅಧ್ಯಕ್ಷ ಜೇಷ್ಠ ಪಡಿವಾಳ, ಪ್ರಧಾನ ಕಾರ್ಯದರ್ಶಿ ಸುದೀಪ್ ಶೆಟ್ಟಿ ಮೂಡಾಯಿಲು, ಸಮಿತಿಯ ಪದಾಧಿಕಾರಿಗಳು ಸದಸ್ಯರು, ಭಕ್ತಾದಿಗಳು ಶ್ರಮದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.