p>
ಬಾರ್ಯ: ಶ್ರೀ ಮಹಾವಿಷ್ಣು ದೇವಸ್ಥಾನದ 5ನೇ ವಾರ್ಷಿಕ ಪ್ರತಿಷ್ಠ ಉತ್ಸವ ಮತ್ತು ಗ್ರಾಮದೈವದ ನೇಮೋತ್ಸವವು ಫೆ. 7 ರಂದು ನಡೆಯಲಿದ್ದು, ದೇವಳದ ಆವರಣದಲ್ಲಿ ಆಮಂತ್ರಣ ಪತ್ರಿಕೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ದೈವಗಳ ಗುರಿಕಾರ ಭಾಸ್ಕರ ಬಾರ್ಯ ಬಿಡುಗಡೆಗೊಳಿಸಿದರು.
ಫೆ. 6 ರಂದು ಹಸಿರು ಹೊರೆಕಾಣಿಕೆ, ಭಜನಾ ಸೇವೆ, ಮಹಾಪೂಜೆ, ಅನ್ನ ಸಂತರ್ಪಣೆ, ರಾತ್ರಿ ರಂಗಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳು ಸಹಕರಿಸಬೇಕೆಂದು ತಿಳಿಸಿದರು.
ದೇವಳದ ಅರ್ಚಕ ಗುರುಪ್ರಸಾದ ನೂರಿತ್ತಾಯ, ಆಡಳಿತ ಸೇವಾ ಟ್ರಸ್ಟಿನ ಟ್ರಸ್ಟಿಗಳಾದ ಪ್ರಶಾಂತ ಪೈ ಬಾರ್ಯ, ಶೇಷಪ್ಪ ಸಾಲಿಯನ್, ನಾರಾಯಣ ಗೌಡ, ಮನೋಹರ ಶೆಟ್ಟಿ, ವಿಶ್ವನಾಥ ಗೌಡ, ರಾಮಣ್ಣಗೌಡ, ಭಾಸ್ಕರ ಮಜಿಕುಡೆ, ವಿದ್ಯಾ ಪ್ರಭಾಕರ ನೂರಿತ್ತಾಯ, ವಿಜಯಲಕ್ಷ್ಮಿ, ನವೀನ, ವಾರಿಣಿ ಗುರುಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.