ಶಿಶಿಲ: 1955ರಲ್ಲಿ ಅಂದರೆ ಸುಮಾರು 70ವರ್ಷಗಳ ಹಿಂದೆ ಸ್ಥಾಪಿತವಾದ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯು ಹಳೆಯ ಕೊಠಡಿಗಳಿಂದ ಪಾಠ ಕೇಳಲು ಆಗದ ಮಕ್ಕಳು ಕುಳಿತು ಕೊಂಡಾಗ ಮಳೆಗಾಲದಲ್ಲಿ ಒದ್ದೆಯಾಗುವ ಪರಿಸ್ಥಿತಿಯಿಂದ ಕೂಡಿದ್ದು ನೂತನ ಕಟ್ಟಡದ ಅವಶ್ಯಕತೆ ಈ ಶಾಲೆಗಿದೆ.
ಹಳೇ ವಿದ್ಯಾರ್ಥಿಗಳೆಲ್ಲ ಸೇರಿ ಒಮ್ಮತದ ಮನಸ್ಸಿನಿಂದ ತಾವು ಕಲಿತ ಶಾಲೆಯ ಹಳೇ ಕಟ್ಟಡದ ಬದಲು ಸುಮಾರು 45ರಿಂದ 50ಲಕ್ಷ ಮೊತ್ತದಲ್ಲಿ ನೂತನ ಕೊಠಡಿಗಳನ್ನು ನಿರ್ಮಿಸಲು ಮುಂದಾಗಿದ್ದು ಇದರ ಅಂಗವಾಗಿ ಶಾಲಾ ಸಭಾಂಗಣದಲ್ಲಿ ನ. 03ರಂದು ಹಳೆವಿದ್ಯಾರ್ಥಿಗಳೆಲ್ಲ ಸೇರಿ ಮಾತುಕತೆ ನಡೆಸಿ ಕಟ್ಟಡದ ಅಭಿವೃದ್ಧಿ ಕೆಲಸದಲ್ಲಿ ಕೈ ಜೋಡಿಸಲು ಹಳೆವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನೂತನ ಕೊಠಡಿಗಳನ್ನು ನಿರ್ಮಿಸಬೇಕೆಂದು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮೋಹನ ಗೌಡ ರವರ ಸಭಾಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿಶ್ಚಯಿಸಿಕೊಂಡರು. ಉದ್ಘಾಟನೆಯನ್ನು ಹಳೇ ವಿದ್ಯಾರ್ಥಿ ಜಯರಾಜ್ ನೆರವೇರಿಸಿದರು.
ನ. 3ರಂದು ನಡೆದ ಸಭೆಯಲ್ಲಿ ಅನೇಕ ಹಳೇವಿದ್ಯಾರ್ಥಿಗಳಿಂದ ಸಹಕಾರ ಘೋಷಣೆ: ಉದ್ಯಮಿಗಳು, ಶಾಲೆಯ ಹಳೇ ವಿದ್ಯಾರ್ಥಿಯಾದ ರಾಘವೇಂದ್ರ ನಾಯಕ್ ನೂತನ ಕಟ್ಟಡದ ಕಾಮಗಾರಿಗೆ 2ಲಕ್ಷ ಮತ್ತು ತಮ್ಮ ಅಧ್ಯಕ್ಷತೆಯ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ 25 ಸಾವಿರ ನೀಡುವುದಾಗಿ ಘೋಷಿಸಿದರು. ಇನ್ನೊರ್ವ ಹಳೇ ವಿದ್ಯಾರ್ಥಿ ಪ್ರಸ್ತುತ ಅರಸಿನಮಕ್ಕಿ ಮತ್ತು ಶಿಬಾಜೆಯಲ್ಲಿ ಪಿ ಡಿ ಓ ಆಗಿ ಕಾರ್ಯನಿರ್ವಹಿಸುತ್ತಿರುವ ಜಯರಾಜ್ 1ಲಕ್ಷ, ನವೀನ್ ರಾಜ್ ಅಡ್ಡಹಳ್ಳ 25,000, ಬಂದೆ ನವಾಜ್ 25,000, ಲಕ್ಷ್ಮಿಕಾಂತ್ ಧರ್ಮದಾಕಲ10,000, ವೇಣುಗೋಪಾಲ್ ಗೋಖಲೆ 5000 ನೀಡುವುದಾಗಿ ಹಿಟಾಚಿ, ಜೆ ಸಿ ಬಿ ಹೊಂದಿರುವ ಶಿಶಿಲದ ಹಳೇವಿದ್ಯಾರ್ಥಿಗಳು ಅರ್ಥ್ ಕೆಲಸ ಸಂಪೂರ್ಣವಾಗಿ ಮಾಡಿಕೊಡುವುದಾಗಿ ಘೋಷಿಸಿದ್ದು, ಹಳೇ ವಿದ್ಯಾರ್ಥಿ ಹರೀಶ್ ಮತ್ತು ಅವರ ತಂಡ ವೈರಿಂಗ್ ಕೆಲಸ ಮಾಡಿಕೊಡುವುದಾಗಿ, 3ಡಿ ಪ್ರಿಂಟ್ ಮತ್ತು ಬಿಲ್ಡಿಂಗ್ ಎಸ್ಟಿಮೇಷನ ಇಂಜಿನಿಯರ್ ಕರುಣಾಕರ್ ಶಾಲೆ ಗುಡ್ಡೆ ಮಾಡಿ ಕೊಟ್ಟಿದ್ದು, ಕಟ್ಟಡಕ್ಕೆ ಬೇಕಾದ ಮರಳು ವ್ಯವಸ್ಥೆಯನ್ನು ನರಸಿಂಹ ಗೌಡ ಶಿಶಿಲ ಮಾಡಿಕೊಡುವುದಾಗಿ ಇಂದಿನ ಹಳೇ ವಿದ್ಯಾರ್ಥಿಗಳ ಸಮಾಗಮ ಸಭೆಯಲ್ಲಿ ತಿಳಿಸಿದ್ದಾರೆ
ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಉದ್ಯಮಿಗಳಾದ ರಾಘವೇಂದ್ರ ನಾಯಕ್ ಬರ್ಗುಳ, ಗ್ರಾಮಪಂಚಾಯತ್ ಅಧ್ಯಕ್ಷ ಸುಧೀನ್ ಡಿ, ನಿವೃತ ಶಿಕ್ಷಕಿ ಸುಗುಣ ಕುಮಾರಿ, ರಾಜ್ ಗೋಖಲೆ, ವೇಣುಗೋಪಾಲ್,ಶಾಲಾ ಮುಖ್ಯ ಶಿಕ್ಷಕಿ ರತ್ನ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಭುವನ್, ಸ್ವಾಗತವನ್ನು ರತ್ನ, ಪ್ರಸ್ತಾವಿಕ ಮಾತನ್ನು ಸಂದೀಪ್ ಅಮ್ಮುಡಂಗೆ, ಧನ್ಯವಾದವನ್ನು ಕರುಣಾಕರ ಶಿಶಿಲ ನೆರವೇರಿಸಿದರು.