ಪುದುವೆಟ್ಟು: ನ.3ರಂದು ಸಂಜೆ ಭಾರಿ ಮಳೆಯೊಂದಿಗೆ ಬೀಸಿದ ಗಾಳಿಯಿಂದಾಗಿ ಸುರಳ್ಳಿ ಬಳಿ ರಸ್ತೆಯ ಮೇಲೆ ಮರ ಬಿದ್ದಿದ್ದು, ಮೇಲಿನಡ್ಕ – ಸುರಳ್ಳಿ – ಬೊಳ್ಮನಾರು ರಸ್ತೆ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ತಂತಿಗಳ ಮೇಲೆ ಮರ ಉರುಳಿರುವುದರಿಂದ ಕಂಬಗಳೂ ವಾಲಿದ್ದು, ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸುರಳ್ಳಿ ಭಾಗದ ಹಲವು ತೋಟಗಳಲ್ಲಿ ಅಡಿಕೆ ಮರಗಳು ಉರುಳಿ ಬಿದ್ದಿದ್ದು, ಅಪಾರ ಹಾನಿ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
p>