ಪತ್ರಿಕಾಗೋಷ್ಠಿ: ಅ.13ರಿಂದ ಮಡಂತ್ಯಾರು ಜೆಸಿಐ ಸಪ್ತಾಹ

0

ಮಡಂತ್ಯಾರು: ಮಡಂತ್ಯಾರು ಜೆಸಿಐ ಸಪ್ತಾಹಕ್ಕೆ 33 ವರ್ಷ ತುಂಬಿದ್ದು, ಈ ಬಾರಿ ಅ.13ರಿಂದ 19ರವರೆಗೆ ಮಡಂತ್ಯಾರು ಕಾಲೇಜು ರಸ್ತೆಯ ಕೊರೆಯ ಕಂಪೌಂಡ್‌ನಲ್ಲಿ ಜೇಸಿ ಸಪ್ತಾಹ ಜರುಗಲಿದೆ ಎಂದು ಘಟಕದ ಪೂವಾಧ್ಯಕ್ಷ ತುಳಸಿದಾಸ್ ಪೈ ತಿಳಿಸಿದರು.

ಬೆಳ್ತಂಗಡಿ ಸುವರ್ಣ ಆರ್ಕೇಡ್‌ನಲ್ಲಿ ಅ.2ರಂದು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಅ.13ರಂದು ಶುಚಿತ್ವ ದಿನ. ಅಂದು ಜೇಸಿ ಸಪ್ತಾಹ ಉದ್ಘಾಟನೆಗೊಳ್ಳಲಿದೆ. ಮುದ್ದು ರಾಧಾಕೃಷ್ಣ ಸ್ಪರ್ಧೆ, 1ರಿಂದ 5ನೇ ತರಗತಿ ಮಕ್ಕಳಿಗೆ ಛೋಟಾ ಚಾಂಪಿಯನ್, 6ರಿಂದ 10ನೇ ತರಗತಿ ಮಕ್ಕಳಿಗೆ ಕುಣಿಯೋಣು ಬಾರಾ ಸ್ಪರ್ಧೆ, ಸಾರ್ವಜನಿಕರ ವಿಭಾಗದಲ್ಲಿ ಡ್ಯುಯೆಟ್ ಡ್ಯಾನ್ಸ್ ಸ್ಪರ್ಧೆ ನಡೆಯಲಿದೆ. ಪ್ರಶಸ್ತಿ ಪಡೆದ ಚಿತ್ರಕಲಾ ಶಿಕ್ಷಕ ವಿಶ್ವನಾಥ ಗೌಡ ಹಾಗೂ ಕುಶಲಕರ್ಮಿ ಬಾಬು ಆಚಾರ್ಯ ಪೆದ್ಯಾರು ಇವರಿಗೆ ಜೇಸಿ ಸಾಧನಾಶ್ರೀ ಪುರಸ್ಕಾರ ನೀಡಿ ಗೌರವಿಸಲಿದ್ದೇವೆ.

ಅ.14ರಂದು ಆದರ್ಶ ದಿನ, ಅಂದು ರಂಗೋಲಿ ಸ್ಪರ್ಧೆ, ಹೂಗುಚ್ಛ ಸ್ಪರ್ಧೆ, ನೆತ್ತರ ಅಂಗನವಾಡಿ ಕೇಂದ್ರ ಪುಟಾಣಿಗಳಿಂದ ಗೆಜ್ಜೆಯ ನಾದ ಸ್ಪರ್ಧೆ, ಮನ ತುಂಬಿ ಹಾಡುವೆನು ಸ್ಪರ್ಧೆ, ಸಾರ್ವಜನಿಕ ವಿಭಾಗದಲ್ಲಿ ಕರೋಕೆ ಚಲನಚಿತ್ರ ಗೀತೆ ಸ್ಪರ್ಧೆ, ಸಂಜೆ ಸಭಾ ಕಾರ್ಯಕ್ರಮ ನಡೆಯಲಿದೆ. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಜೇಸಿ ವಿಜಯ 2024 ಪುರಸ್ಕಾರ, ಕೃಷಿ ಕ್ಷೇತ್ರದ ಸಾಧಕ ವಿಶ್ವನಾಥ ಪೂಜಾರಿಯವರಿಗೆ ಜೇಸಿ ಸಾಧನಾಶ್ರೀ ಪುರಸ್ಕಾರ, ನಿವೃತ್ತಿ ಸೇನಾನಿ ವಿಕ್ರಮ್ ಜೆ.ಎನ್. ಇವರಿಗೆ ಜೇಸಿ ಜೈ ಜವಾನ್ ಪುರಸ್ಕಾರ ನೀಡಿ ಗೌರವಿಸಲಿದ್ದೇವೆ.

ಪ್ರತಿದಿನ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸಾಧಕರನ್ನು ಗೌರವಿಸಲಾಗುತ್ತದೆ. ಅ.19ರಂದು ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ. ಲಕ್ಷ್ಮಿ ಗ್ರೂಪ್ಸ್ ಉಜಿರೆಯ ಮೋಹನ್ ಕುಮಾರ್‌ರಿಗೆ ಜೇಸಿ ಸಪ್ತಾಹ ಪುರಸ್ಕಾರ ನೀಡಿ ಗೌರವಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಅಶೋಕ್ ಗುಂಡಿಯಲ್ಕೆ, ಜೆಸಿಐ ಮಡಂತ್ಯಾರು ಅಧ್ಯಕ್ಷ ವಿಕೇಶ್ ಮಾನ್ಯ, ಸಪ್ತಾಹ ಸಂಯೋಜಕ ಯತೀಶ್ ರೈ, ಮನೋಜ್ ಮಾಯಿಲೋಡಿ, ಕಾರ್ಯದರ್ಶಿ ಸಂಯುಕ್ತ ಪೂಜಾರಿ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here