ಧರ್ಮಸ್ಥಳ: ಶ್ರೀ ಧ ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

0

ಧರ್ಮಸ್ಥಳ: ಶ್ರೀಧ ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮೊದಲಿಗೆ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಹುತಾತ್ಮರನ್ನು ಸ್ಮರಿಸಲಾಯಿತು ತದನಂತರ ಶಾಲೆಯ ಸ್ಕೌಟ್ ಗೈಡ್ ಕಬ್ ಬುಲ್ ಬುಲ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜೊತೆಯಾಗಿ ಸರ್ವಧರ್ಮ ಪ್ರಾರ್ಥನೆಯನ್ನು ಮಾಡಿದರು ಕಬ್ ಮಾಸ್ಟರ್ ಹೇಮಾವತಿ ಜೈನ್ ಅವರು ಗಾಂಧಿ ಜಯಂತಿಯ ಮಹತ್ವದ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಿಂದ ಗಾಂಧೀಜಿ ಯವರ ಆದರ್ಶಗಳ ಕುರಿತಾಗಿ ಕಿರು ಪ್ರಹಸನ ನಡೆಯಿತು.

ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಕಾರ್ಯಕ್ರಮಕ್ಕೆ ಸೂಕ್ತ ಮಾರ್ಗದರ್ಶನಗಳನ್ನು ನೀಡಿದರು.

ಗೈಡ್ ಕ್ಯಾಪ್ಟನ್ ಗೀತಾ ಅವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಫ್ಲಾಕ್ ಲೀಡರ್ ಸೌಮ್ಯ ವಂದನಾರ್ಪಣೆ ಮಾಡಿದರು.

ಶಾಲೆಯ ಕಬ್ ಮಾಸ್ಟರ್ ಅಮೃತ ವಿ ಶೆಟ್ಟಿ, ಸ್ಕೌಟ್ ಗೈಡ್ ವಿಭಾಗದ ಎಲ್ಲಾ ಶಿಕ್ಷಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಸಾಂಪ್ರದಾಯಿಕ ಸಿಹಿ ಬೆಲ್ಲವನ್ನು ನೀಡುವುದರ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತ್ತು.

LEAVE A REPLY

Please enter your comment!
Please enter your name here