

ಬಳಂಜ: ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಳ್ಯ ಎಂಬಲ್ಲಿ ಜಯಂತಿ ಎಂಬವರ ಮನೆ ಬಳಿ ಧರೆಯೊಂದು ಕುಸಿದು ಬಿದ್ದಿದ್ದು ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.
ಧರೆಯ ಕುಸಿತ ಹೀಗೆಯೇ ಮುಂದುವರಿದರೆ ನಿಟ್ಟಡ್ಕ ತೋಟದಪಲ್ಕೆ ಸಂಪರ್ಕ ರಸ್ತೆ ಸಹ ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು ಸಮಾಜ ಸೇವಕ ಸುನೀಲ್ ಶೆಟ್ಟಿಯವರು ಸುದ್ದಿ ಬಿಡುಗಡೆಗೆ ಮಾಹಿತಿ ನೀಡಿದ್ದಾರೆ.