

ಬೆಳ್ತಂಗಡಿ: ಉಜಿರೆಯ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಿಲ್ಲಿಂಗ್ ಸ್ಟಾಫ್ ಆಗಿದ್ದ ಪಲ್ಲವಿ ಜೈನ್(32ವ) ಅನಾರೋಗ್ಯದಿಂದ ಜೂ.7ರಂದು ಆಸ್ಪತ್ರೆಯಲ್ಲಿ ನಿಧನರಾದರು.
ಅಳದಂಗಡಿ ಸಮೀಪದ ಬಡಗಕಾರಂದೂರು ನಿವಾಸಿ, ಬೆಳ್ತಂಗಡಿಯ ಅಯಾನ್ಸ್ ಮೊಬೈಲ್ಸ್ ಮಾಲಕ ಅರಿಹಂತ್ ಜೈನ್ ಅವರ ಪತ್ನಿಯಾಗಿರುವ ಪಲ್ಲವಿ ಕೆಲತಿಂಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದರು.
ಅವರು ಪತಿ, ಗಂಡು ಮಗು, ತಂದೆ-ತಾಯಿಯನ್ನು ಅಗಲಿದ್ದಾರೆ.