ಕಾಶಿಪಟ್ಣ : ಕಾಶಿಪಟ್ಣ ಕೇಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಮಾ.13ರಿಂದ 17ರ ವರೆಗೆ ವಿವಿಧ ಧಾರ್ಮಿಕ ಸಾಂಸ್ಕೃಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಾ.13ರಂದು ದೇವತಾ ಪ್ರಾರ್ಥನೆ,ತೋರಣ ಮುಹೂರ್ತ ಶ್ರೀ ದೇವರಿಗೆ ಪಂಚಾಮೃತ ಪುರಸ್ಸರ ,ನವಕ ಪ್ರಧಾಗಿನಕಾಯಿ ಗಣಯಾಗ, ಅಶ್ವತ್ಥ ವೃಕ್ಷಕ್ಕೆ ಉಪನಯನ,ವಿವಾಹ ಮೊದಲಾದ ಷೋಡಶ ಸಂಸ್ಕಾರ, ಬೆ.11ಕ್ಕೆ ಧ್ವಜಾರೋಹಣ, ಮಹಾಪೂಜೆ, ನಿತ್ಯಬಲಿ, ಮ.1ರಿಂದ ಅನ್ನಸಂತರ್ಪಣೆ, ಸಂಜೆ 7ರಿಂದ ಭಜನೆ, ಉತ್ಸವ ಬಲಿ, ಮಹಾಪೂಜೆ, ಭಜನಾ ಕಾರ್ಯಕ್ರಮ, ರಾತ್ರಿ 8.30ರಿಂದ ಶ್ರೀ ಪಂಚಲಿಂಗೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ, ಕೇಳದಪೇಟೆ ಇವರಿಂದ ಯಕ್ಷಗಾನ ಬಯಲಾಟ.ಮಾ.14ರಂದು ಗ ಉಷ:ಕಾಲ ಪೂಜೆ, ಪಂಚಾಮೃತ, ಕಲಶಾಭಿಷೇಕ, ಶತರುದ್ರಾಭಿಷೇಕ. ಬೆ.9ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಗಂಟೆ 12ಕ್ಕೆ ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ, ಸಂ.7 ರಿಂದ ಭಜನೆ, ನಿತ್ಯಬಲಿ, ಮಹಾಪೂಜೆ, ಸಂಜೆ 7ರಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 8ರಿಂದ ಶ್ರೀ ವಿಜಯ ಕುಮಾರ್ ಜೈನ್ ಸಾರಥ್ಯದ ಆಮಂತ್ರಣ ಪರಿವಾರ ತಂಡದಿಂದ ಟಿ.ವಿ.ಶೋಗಳಲ್ಲಿ ಕಾಣಿಸಿಕೊಂಡ ಪ್ರತಿಭೆಗಳಿಂದ ಗಾನ-ನೃತ್ಯ-ವೈಭವ ನಡೆಯಲಿದೆ.
ಮಾ.15ರಂದು ಪೂರ್ವಾಹ್ನ ಉಷ:ಕಾಲ ಪೂಜೆ, ಪಂಚಾಮೃತ, ಕಲಶಾಭಿಷೇಕ, ಅಲಂಕಾರ ಪೂಜೆ, ಚಂಡಿಕಾಯಾಗ, ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ, ಸಂಜೆ ಗಂಟೆ 6ರಿಂದ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಯಕ್ಷಗಾನ ಬಯಲಾಟ, ಸಂಜೆ 7ರಿಂದ ಭಜನಾ, ಕಾರ್ಯಕ್ರಮ ದರ್ಶನ ಬಲಿ, ವಸಂತ ಪೂಜೆ, ಮಹಾಪೂಜೆ.
ಮಾ.16ರಂದು ಪೂರ್ವಾಹ್ನ ಉಷ:ಕಾಲ ಪೂಜೆ, ಪಂಚಾಮೃತ, ಕಲಶಾಭಿಷೇಕ, ಮಹಾಪೂಜೆ, ನಿತ್ಯಬಲಿ ಅನ್ನಸಂತರ್ಪಣೆ ಸಂಜೆ 7ರಿಂದ ಭಜನೆ, ಸವಾರಿ ಬಲಿ, ಕಟ್ಟೆಪೂಜೆ, ಮಹಾಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ,ರಾತ್ರಿ 8ರಿಂದ ಪಿಂಗಾರ ಕಲಾವಿದೆರ್, ಬೆದ್ರ-ಇವರಿಂದ -ತುಳು ನಾಟಕ “ಕದಂಬ”.
ಮಾ.17ರಂದು ಪೂವಾಹ್ನ ಕವಾಟೋದ್ಘಾಟನೆ, ಪಂಚಾಮೃತ, ಕಲಶಾಭಿಷೇಕ, ಮಹಾಪೂಜೆ, ಚೂರ್ಣೋತ್ಸವ, ಮಹಾರಥೋತ್ಸವ, ಅನ್ನಸಂತರ್ಪಣೆ ಸಂಜೆ ಗಂಟೆ 7 ರಿಂದ ಭಜನಾ ಕಾರ್ಯಕ್ರಮ ನಂತರ ಕೊಡಮಣಿತ್ತಾಯ ದೈವದ ಭಂಡಾರ ಬರುವುದು.ರಾತ್ರಿ ಗಂಟೆ 11ಕ್ಕೆ ಗಗ್ಗರ ಸೇವೆ, ಬಲಿ ಹೊರಡುವುದು, ಅವಭೃತ ಸ್ನಾನದ, ಧ್ವಜಾವರೋಹಣ.
ಮಾ.18ರಂದು ಪೂರ್ವಾಹ್ನ ಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ ನಡೆಯಲಿದೆ.