ಗುರಿಪಳ್ಳ: ಶ್ರೀ.ಧ.ಮಂ.ಕಾಲೇಜು (ಸ್ವಾಯತ್ತ) ಉಜಿರೆಯ ರಾಷ್ಟೀಯ ಸೇವಾ ಯೋಜನಾ ಘಟಕದ ವತಿಯಿಂದ ಗುರಿಪಳ್ಳದ ದ.ಕ.ಜಿ.ಪಂ. ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಾಕ್ಕಾಗಿ ಯುವಜನತೆ” ಎಂಬ ಧ್ಯೆಯ ವಾಕ್ಯದಡಿಯಲ್ಲಿ ಸುಧೀರ್ಘ ಏಳು ದಿನಗಳ ಕಾಲ ಜರುಗುತ್ತಿರುವ ವಾರ್ಷಿಕ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ.
ಜ.28ರಂದು ಶ್ರೀ ಧ.ಮಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ, ಕೆ.ವಿ.ಜಿ.ದಂತ ಮಹಾ ವಿದ್ಯಾಲಯ, ಸುಳ್ಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯ ಸಹಯೋಗದೊಂದಿಗೆ ಆರೋಗ್ಯ ಶಿಬಿರ ಮತ್ತು ಅಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಕಾರ್ಯಕ್ರಮವನ್ನು ಉಜಿರೆಯ ‘ಕನಸಿನ ಮನೆ ‘, ಲಕ್ಷ್ಮಿ ಇಂಡಸ್ಟ್ರೀಸ್ ಮ್ಹಾಲಕರಾದ ಕೆ. ಮೋಹನ್ ಕುಮಾರ್ ರವರು ದೀಪ ಬೆಳಗಿಸುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
“ಆರೋಗ್ಯ ಶಿಬಿರ ಜರುಗುವುದು ಕೇವಲ ರೋಗಿಗಳಿಗೆ ಮಾತ್ರವಲ್ಲ, ಅದರ ಫಲಾನುಭವಗಳ್ಳನ್ನು ಎಲ್ಲರು ಪಡೆದುಕೊಳ್ಳಬೇಕು.ರೋಗ ಬಂದ ಮೇಲೆ ವ್ಯತೆ ಪಡುವುದಕ್ಕಿಂತ ಮುಂಚಿತವಾಗಿ ತಪಾಸಣೆ ಮಾಡಿಸಿಕೊಂಡು ನಮ್ಮ ದೇಹದ ಬಗ್ಗೆ ಅರಿವನ್ನು ಕಂಡುಕೊಂಡು ಆರೋಗ್ಯವಾಗಿರುವುದು ಉತ್ತಮ. ಎನ್. ಎಸ್. ಎಸ್ ಘಟಕದ ವತಿಯಿಂದ ಇನ್ನಷ್ಟು ಇಂತಹ ಕಾರ್ಯಕ್ರಮಗಳು ಮೂಡಿಬರಲಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸುಳ್ಯದ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಡಾ.ಎಂ.ಎಂ. ದಯಾಕರ್ ಅವರು ಮಾತನಾಡಿ, ” ಈ ಮೊದಲು ನಾವು ಮತ್ತು ಎಸ್.ಡಿ.ಎಂ. ಕಾಲೇಜಿನ ಎನ್. ಎಸ್. ಎಸ್. ಘಟಕದವರು ಸಹಯೋಗದಿಂದ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದೇವೆ.ಮುಂದೆಯೂ ಇಂತಹ ಕಾರ್ಯಕ್ರಮಗಳ್ಳನ್ನು ಜಂಟಿಯಾಗಿ ನಡೆಸಿ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುತ್ತೇವೆ.” ಎಂದು ಹೇಳಿದರು.
ಅತಿಥಿಯಾಗಿ ಆಗಮಿಸಿದ್ದ ಬೆಳ್ತಂಗಡಿಯ ಲಯನ್ಸ್ ಕ್ಲಬ್ ನ ಅಧ್ಯಕ್ಷರಾಧ ಲಯನ್ ಉಮೇಶ್ ಶೆಟ್ಟಿಯವರು ಎನ್.ಎಸ್.ಎಸ್ ನಲ್ಲಿ ಜರುಗುವ ಸಮಾಜಮುಖಿ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಶಂಶಿಸಿದರು. ಬೆಳ್ತಂಗಡಿಯ ಲಯನ್ಸ್ ಕ್ಲಬ್ ನ ಕಾರ್ಯದರ್ಶಿಯಾಗಿರುವ ಅನಂತ್ ಕೃಷ್ಣ, ಶ್ರೀ ಧ.ಮಂ. ಕಾಲೇಜು (ಸ್ವಾಯತ್ತ) ಉಜಿರೆಯ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ ಅಭಿಜಿತ್ ಬಡಿಗೇರ, ಶ್ರೀ ಧ.ಮಂ.ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯ ವೈದ್ಯರಾದ ಡಾ.ಉಷಾ ಶೆಟ್ಟಿ , ಉಜಿರೆಯ ನೇತ್ರ ತಜ್ಞರಾದ ಡಾ.ವಿದ್ಯಾವತಿ ಜಿ.ರಾವ್, ಸುಳ್ಯದ ಕೆ.ವಿ.ಜಿ. ದಂತ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿರುವ ಜಯಂತ್, ಶ್ರೀ ಧ.ಮಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯ ಪ್ರಯೋಗಾಲಯದ ಮುಖ್ಯಸ್ಥರಾಗಿರುವ ಶ್ರೀ ಶಿತಿಕಂಠ ಭಟ್, ಬೆಳ್ತಂಗಡಿಯ ಲಿಯೋ ಕ್ಲಬ್ ನ ಅಧ್ಯಕ್ಷರಾಗಿರುವ ಲಿಯೋ. ಅಪ್ಸರ ಎಚ್. ಆರ್ ಗೌಡ, ಉಜಿರೆಯ ಶ್ರೀ ಧ.ಮಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ ಚಿದಾನಂದ ಮತ್ತು ಶ್ರೀ ಎಸ್. ಸುಮಂತ್ ರೈ, ಯೋಜನಾಧಿಕಾರಿಗಳಾದ ಪ್ರೊ.ದೀಪಾ ಆರ್.ಪಿ ಹಾಗೂ ವೈದ್ಯಕೀಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಯೋಜನಾಧಿಕಾರಿಗಳಾದ ಡಾ.ಮಹೇಶ್ ಕುಮಾರ್ ಶೆಟ್ಟಿ.ಹೆಚ್ ಸ್ವಾಗತಿಸಿದರು. ಸ್ವಯಂ ಸೇವಕಿ ವೀಕ್ಷ ನಿರೂಪಿಸಿದರು, ಚಿಂತನ ವಂದಿಸಿದರು.ಈ ಬೃಹತ್ ಉಚಿತ ಆರೋಗ್ಯ ಶಿಬಿರದ ಸೇವೆಯಲ್ಲಿರಕ್ತಗುಂಪು ಪರಿಕ್ಷೆ, ಮೂಳೆ ಶಸ್ತ್ರಚಿಕಿತ್ಸೆ , ನೇತ್ರ ಚಿಕಿತ್ಸೆ,ಬಿ.ಪಿ, ಡೈಯಾಬಿಟಿಸ್ ಪರೀಕ್ಷೆ, ದಂತ ಚಿಕಿತ್ಸೆ ಸೇವೆಗಳನ್ನು ನೀಡಲಾಗಿದ್ದು, ಮುನ್ನೂರೈವತ್ತಕ್ಕೂ ಹೆಚ್ಚು ಗ್ರಾಮಸ್ಥರು ಮತ್ತು ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡರು.