ಉಜಿರೆ ಶ್ರೀ ಧ.ಮಂ.ಕಾಲೇಜಿನಲ್ಲಿ ನೋ ಫುಡ್ ವೇಸ್ಟ್ ವಿಷಯದ ಕುರಿತು ವಿಶೇಷ ಉಪನ್ಯಾಸ ಜಾಗೃತಿ ಕಾರ್ಯಕ್ರಮ-ಆಹಾರವನ್ನು ಎಸೆಯದಿರಿ ಬದಲಾಗಿ ಗೌರವಿಸಿ: ಬಿ.ಸೋಮಶೇಖರ್ ಶೆಟ್ಟಿ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜು ಉಜಿರೆಯ ಸಮ್ಯಗ್ದರ್ಶನ ಸಭಾಂಗಣದಲ್ಲಿ ರಾಷ್ಟೀಯ ಸೇವಾ ಯೋಜನಾ ಘಟಕಗಳು ಮತ್ತು ಸಾಮಾಜಿಕ ಜವಾಬ್ದಾರಿ ಉಪಕ್ರಮ ಸಮಿತಿ ಜಂಟಿಯಾಗಿ ಆಯೋಜಿಸಲ್ಪಟ್ಟ”ನೋ ಫುಡ್ ವೇಸ್ಟ್ “ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಜಾಗೃತಿ ಕಾರ್ಯಕ್ರಮವು ನ.23 ರಂದು ಹಮ್ಮಿಕೊಳ್ಳಲಾಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದಂತಹ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಬಿ.ಸೋಮಶೇಖರ ಶೆಟ್ಟಿ ಅವರು ಆಹಾರದ ಮಹತ್ವದ ಬಗ್ಗೆ ಮಾತನಾಡಿ “ನಾವು ಅನ್ನವನ್ನು ಬಿಸಾಡಿದರೆ ಅದು ನಮ್ಮನ್ನು ಮತ್ತೆ ಹೆಕ್ಕಿಸುತ್ತೆ, ನಾವು ಎಸೆಯುವ ಆಹಾರ ಇನ್ನೊಬ್ಬರ ಜೀವನವನ್ನು ರೂಪಿಸುತ್ತೆ ಹಾಗಾಗಿ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಆಹಾರವನ್ನು ಎಸೆಯದೆ ಉತ್ತಮ ಪ್ರಜೆಗಳಾಗುವುದು ನಮ್ಮೆಲ್ಲರ ಆಧ್ಯ ಕರ್ತವ್ಯ.ನಾವು ಜೀವನದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಉತ್ತಮ ಕೌಶಲ್ಯ ಮೌಲ್ಯಗಳನ್ನು, ಸಭ್ಯ ಸಾಮಾಜಿಕ ನಡವಳಿಕೆಯನ್ನು ಮೈಗೂಡಿಸಿಕೊಳ್ಳಬೇಕು.ಒಂದು ಹೊತ್ತು ಅನ್ನಕ್ಕಾಗಿ ಕಾಯುವ ಜನರಿದ್ದಾರೆ ಹಾಗಾಗಿ ನಾವು ಆಹಾರವನ್ನು ವ್ಯರ್ಥ ಮಾಡಬಾರದು, ನಮಗೆ ಬೇಕಾದಷ್ಟನ್ನ ಮಾತ್ರ ಬಡಿಸಿಕೊಳ್ಳಬೇಕು.ಆಹಾರ ವ್ಯರ್ಥದ ಬಗ್ಗೆ ನೀವು ನಿಮ್ಮ ಜೊತೆಗಿರುವವರಿಗೆ ಜಾಗೃತಿ ಮೂಡಿಸಬೇಕು.” ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಕುಮಾರ ಹೆಗ್ಡೆ ಆಹಾರದ ಕುರಿತು ಮಾತನಾಡಿ “ಆಹಾರ ವಿಹಾರ, ಆಚಾರ ವಿಚಾರ ಈ ಶಿಸ್ತನ್ನು ಪಾಲಿಸಿದರೆ ಆಹಾರ ವ್ಯರ್ಥಮಾಡುವ ಮನೋಭಾವವೇ ಬರುವುದಿಲ್ಲ” ಎಂದು ಹೇಳಿದರು.

“ನೋ ಫುಡ್ ವೇಸ್ಟ್ ” ಎಂಬ ವಿಷಯದ ಕುರಿತು ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.ಯೋಜನಾಧಿಕಾರಿ ಪ್ರೊ.ದೀಪಾ ಆರ್.ಪಿ ಉಪಸ್ಥಿತರಿದ್ದರು.ಸ್ವಯಂ ಸೇವಕಿ ಕ್ರತಿ ವಂದಿಸಿದರು.ಸ್ವಯಂ ಸೇವಕಿ ಚಿಂತನ ನಿರೂಪಿಸಿದರು.

p>

LEAVE A REPLY

Please enter your comment!
Please enter your name here