ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು, ಇಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ, ಮಾನವಿಕ ಸಂಘದ ವತಿಯಿಂದ, “ಸಾಂಸ್ಕೃತಿಕ ಏಕತಾ ದಿನ” ಎಂಬ ಕಾರ್ಯಕ್ರಮವನ್ನು ನ.23ರಂದು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ, ಸೇಕ್ರೆಡ್ ಹಾರ್ಟ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವಂತಹ ಪ್ರೊ.ಆಲ್ವಿನ್ ಕೆ.ಜಿ ಇವರು ಉಪಸ್ಥಿತರಿದ್ದರು.ಇವರು ಭಾರತೀಯ ಸಂಸ್ಕೃತಿಯ ವಿವಿಧ ಆಚರಣೆಗಳ ಬಗ್ಗೆ ಹಾಗೂ ಎಲ್ಲಾ ಧರ್ಮದವರು ಭಗವಂತನನ್ನ ಆರಾಧಿಸುವ ಬಗೆ ಮತ್ತು ಇತರ ಧರ್ಮಗಳ ಹಬ್ಬಹರಿದಿನಗಳಲ್ಲೂ ಪಾಲ್ಗೊಳ್ಳುವ ಭಾರತೀಯ ಸಂಸ್ಕೃತಿಯನ್ನು ಪ್ರಶಂಷಿಸಿದರು.ಇಂತಹ ಸಂಸ್ಕೃತಿಯನ್ನು ಯುವಜನರು ಪಾಲಿಸಬೇಕೆಂಬ ಸಂದೇಶವನ್ನು ನೀಡಿದರು.
ಸೇಕ್ರೆಡ್ ಹಾರ್ಟ್ ಕಾಲೇಜಿನ ಗ್ರಂಥ ಪಾಲಕರಾಗಿರುವ ಪ್ರೊ.ಪೌಲ್ ಮಿನೇಜಸ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಇವರು ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಹಾಗೂ ಎಲ್ಲಾ ಸಂಸ್ಕೃತಿಯನ್ನು ಒಳಗೊಂಡಂತಹ ರಾಷ್ಟ್ರವಾಗಿದೆ ಎಂದು ಹೇಳುವುದರ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದರು.
ಪ್ರಥಮ, ದ್ವಿತೀಯ ಹಾಗೂ ತೃತೀಯ ಕಲಾ ವಿಭಾಗದ ಒಬ್ಬೊಬ್ಬ ವಿದ್ಯಾರ್ಥಿನಿಯರು “ಸಾಂಸ್ಕೃತಿಕ ಏಕತಾ ದಿನ”ದ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಸಮಾಸಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಪ್ರಕಾಶ್ ಕ್ರಮಧಾರಿ ಇವರು ಸ್ವಾಗತಿಸಿ, ಮಾನವಿಕ ಸಂಘದ ಸಂಯೋಜಕಿಯಾದ ಕುಮಾರಿ ರಕ್ಷಿತಾ.ಎಸ್ ಇವರು ಕಾರ್ಯಕ್ರಮವನ್ನು ಸಂಘಟಿಸಿ ವಂದಿಸಿದರು.ವಿದ್ಯಾರ್ಥಿನಿಯರಾದ ನಿಝ್ಮಾ ಬಾನು ಮತ್ತು ಕೃಪಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.