ಪಡಂಗಡಿ: ಪರಮ ಪೂಜ್ಯ “ಧಾನ್ಯ ದಿವಾಕರ” ಮುನಿಶ್ರೀ 108 ಜೈಕೀರ್ತಿ ಮಹಾರಾಜರ ಪರಮ ಶಿಷ್ಯ ಪರಮ ಪೂಜ್ಯ ಮುನಿಶ್ರೀ 108 ದಿವ್ಯಸಾಗರ ಮಹಾರಾಜರು.ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಪಡಂಗಡಿಯಲ್ಲಿ ಜು.9 ರಿಂದ ನ.12 ಭವ್ಯ ಚಾತುರ್ಮಾಸ ವರ್ಷಯೋಗ ನಡೆಸಲಿದ್ದಾರೆ.
ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜೈನ ಮುನಿಗಳು ಈವರ್ಷ ಪಡಂಗಡಿ ಬಸದಿಯಲ್ಲಿ ಚಾತುರ್ಮಾಸ ವೃತವನ್ನು ಆಚರಿಸುತ್ತಿದ್ದಾರೆ.
ಈ ವೇಳೆ ಆಶೀರ್ವಚನ ನೀಡಿ ಸ್ವಾಮಿಗಳು ಜೈನ ಮುನಿ ಹತ್ಯೆ ಖಂಡಿಸಿ ದೇಶವೇ ಕಂಬನಿ ಮಿಡಿದಿದೆ.ಜೈನ ಧರ್ಮಕ್ಕೆ ಸಂಕಟವಾಗಿದೆ.ಚಾತುರ್ಮಾಸ ದಲ್ಲಿ ನಮಗೆ ಜೀವನದಲ್ಲಿ ಪರಿವರ್ತನೆಯಾಗುತ್ತದೆ. ಪಡಂಗಡಿಯಲ್ಲಿ ಧರ್ಮ ನೆಲೆಯಾಗಿದೆ. ಇಲ್ಲಿ ಶಾಂತಿ ನೆಮ್ಮದಿ ನೆಲೆ ನಿಂತಿದೆ ಇಲ್ಲಿನ ಜನ ಭಕ್ತಿ ಹೆಚ್ಚಾಗಿದೆ ಅದ್ದರಿಂದ ಧರ್ಮ ಸಂಚಯನ ಹೆಚ್ಚಿದೆ, ಆಕರ್ಷಣೆ ಇದೆ ಎಂದು ಹೇಳಿದರು.
ಇನ್ನೂ 4 ತಿಂಗಳ ಕಾಲ ಪಡಂಗಡಿಯಲ್ಲಿ ಚಾತುರ್ಮಾಸ ವೃತವನ್ನು ಕೈಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಬಸದಿಯ ಪ್ರಮುಖರು ಜೈನ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.
p>