ರಾಜ್ಯದಲ್ಲಿ 125 ರಿಂದ 130 ಸ್ಥಾನದೊಂದಿಗೆ ಬಿಜೆಪಿ ಅಧಿಕಾರಕ್ಕೆ- ಪ್ರತಾಪಸಿಂಹ ನಾಯಕ್ ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ಈ ಬಾರಿಯ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 125 ರಿಂದ 130 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಪಕ್ಷದ ಹಿರಿಯ ನಾಯಕ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಹೇಳಿದರು.

ಅವರು ಮೇ.1 ರಂದು ಬಿಜೆಪಿ ಚುನಾವಣಾ ಕಚೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಬಹುಮತ ವಿಲ್ಲದೆ ಗೊಂದಲಗಳ ರಾಜಕೀಯ ಅಸ್ಥಿರ ಸರಕಾರ ನಡೆಸಿದೆ.ಈ ಅಸ್ಥಿರ ಸರಕಾರಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರಣ. ಈ ಅಸ್ಥಿರ ಸರಕಾರದಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದು ರಾಜ್ಯದ ಜನತೆಗೆ ತಿಳಿದಿದೆ ಇದರಿಂದ ಬಹು ಮತದ ಬಿ ಜೆ ಪಿ ಸರಕಾರವನ್ನೇ ಈ ಬಾರಿ ಜನರು ಬಯಸಿದ್ದಾರೆ ಆದುದರಿಂದ ಬಹುಮತದ ಬಿ ಜೆ ಪಿ ಅಧಿಕಾರಕ್ಕೆ ಬರಲಿದೆ.ರಾಜ್ಯದ ಎಲ್ಲಾ ಕಡೆ ಅಭಿವೃದ್ಧಿಗಳು, ಸರಕಾರದ ಎಲ್ಲಾ ಯೋಜನೆಗಳು ಜನರಿಗೆ ನೇರ ತಲುಪಿದೆ. ಕಾಂಗ್ರೆಸ್ಸಿನ ಸುಳ್ಳು ಗ್ಯಾರಂಟಿಗಳನ್ನು ನಂಬುವುದಿಲ್ಲ.ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿ ಆಡಳಿತಕ್ಕೆ ಬಂದ ಪ್ರಥಮ ಕ್ಯಾಬಿನೆಟ್ ಸಭೆಯಲ್ಲಿ ನೀಡುವ ಭರವಸೆ ಕೊಟ್ಟಿದ್ದರೂ ಒಂದು ವರ್ಷ ಆದರೂ ಯಾವ ಗ್ಯಾರಂಟಿ ಅಲ್ಲಿ ಸಿಗಲಿಲ್ಲ.ರೈತರಿಗೆ ವರ್ಷಕ್ಕೆ ಕೇಂದ್ರ ಸರಕಾರ 6 ಸಾವಿರ ಮತ್ತು ರಾಜ್ಯ ಸರಕಾರ 4 ಸಾವಿರ ನೀಡಿ ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತಿದೆ.ಅಡಿಕೆ ಬೆಳೆಗಾರರಿಗೆ ಬೆಳೆ ವಿಮೆ ಮೂಲಕ ರೈತರ ಖಾತೆಗೆ ಹಣ ಪಾವತಿಯಾಗಿದೆ.ಬೆಳ್ತಂಗಡಿ ಬೂತ್ ಮಟ್ಟದಲ್ಲಿ ಜಾತಿ ಮತ ಇಲ್ಲದೆ ಅಭಿವೃದ್ಧಿಯಾಗಿದ್ದು, ತಾಲೂಕಿನ ದೇವಸ್ಥಾನಗಳಿಗೆ ಸಿದ್ದರಾಮಯ್ಯರ ಸರಕಾರ ಇರುವಾಗ ಯಾವುದೇ ಅನುದಾನ ನೀಡಲಿಲ್ಲ. ಕಳೆದು 5 ವರ್ಷದ ನಮ್ಮ ಸರಕಾರದ ಅವಧಿಯಲ್ಲಿ ದೇವಸ್ಥಾನ ಅಲ್ಲದೆಇತರ ಧಾರ್ಮಿಕ ಕೇಂದ್ರಗಳಿಗೆ ಕೋಟ್ಯಂತರ ರೂಪಾಯಿ ಅನುಧಾನ ಒದಗಿಸಿದೆ.ಈ ಎಲ್ಲಾ ಅಭಿವೃದ್ಧಿ ಕಂಡು ಮತ ನೀಡಿ ಆಶೀರ್ವಾದ ನೀಡಲಿದ್ದಾರೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್, ಗಣೇಶ್ ಗೌಡ ನಾವೂರು, ಮಂಡಲದ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ ಪಿ., ಬೆಳ್ತಂಗಡಿ ಚುನಾವಣಾ ಸಂಚಾಲಕ ಮಹಾಬಲ ಗೌಡ, ಚುನಾವಣೆ ಅಭ್ಯರ್ಥಿ ಪ್ರಮುಖ್ ಜಯಾನಂದ ಗೌಡ, ರಾಜೇಶ್ ಪೆರ್ಮುಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here