ಎಸ್.ಡಿ.ಎಂ ಕಾಲೇಜು ಉಜಿರೆಯಲ್ಲಿ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮಿಲನ

0

ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು(ಸ್ವಾಯತ್ತ)ಉಜಿರೆ ಇದರ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನಡೆಯಿತು.
ಹಿರಿಯ ವಿದ್ಯಾರ್ಥಿಗಳ ಸಂಘ(ರಿ) ಪ್ರತಿ ವರ್ಷ ಮೇ.1ರಂದು ಆಯೋಜಿಸಲ್ಪಡುವ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ವಿದೇಶ, ಹೊರ ರಾಜ್ಯ, ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಹಳೆ ವಿದ್ಯಾರ್ಥಿಗಳು ಭಾಗವಹಿಸಿದರು.

ಕಾರ್ಯಕ್ರಮವದ ಉದ್ಘಾಟನೆಯನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಬೆಂಗಳೂರಿನ ಕ್ಷೇಮವನದ ನಿರ್ದೇಶಕಿ ಶ್ರದ್ಧಾ ಅಮಿತ್ ನೆರವೇರಿಸಿ, ಮಾತನಾಡಿ ನಾನು ಈ ಕಾಲೇಜಿನಲ್ಲಿದ್ದ ಕ್ಷಣಗಳು ಬಹಳ ಉತ್ತಮವಾಗಿತ್ತು.‌ಎಸ್ ಡಿ ಎಂ ಕಾಲೇಜಿನಲ್ಲಿ ಬಹಳ ಅದ್ಭುತವಾದ ಪ್ರಯೋಗಗಳು ನಡೆದಿವೆ.ನಮ್ಮ ಕಾಲೇಜಿನಲ್ಲಿ ಇಂಗ್ಲೀಷ್,ಮನಃಶಾಸ್ತ್ರ,ಜರ್ನಲಿಸಂ ಓದಿದ್ದೇನೆ. ಅಂದು ಪಠ್ಯ,ಪಠ್ಯೇತರ ಚಟುವಟಿಕೆಗೆ ಇಲ್ಲಿ ಸಿಕ್ತಿದ್ದ ಪ್ರೋತ್ಸಾಹ ಅವಿಸ್ಮರಣೀಯವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ.ಪ್ರದೀಪ ನಾವೂರ ಅವರು ಮಾತನಾಡಿ “ಎಸ್ ಡಿ ಎಂ ಸಂಸ್ಕೃತಿಯನ್ನು ಪ್ರಪಂಚದ ಮೂಲೆ ಮೂಲೆಗಳಿಗೆ ತಲುಪಿಸಿದವರು ಹಿರಿಯ ವಿದ್ಯಾರ್ಥಿಗಳಾಗಿದ್ದಾರೆ.ಈಗಿನ ವಿದ್ಯಾರ್ಥಿಗಳಿಗೆ ಹೊಸತನದ ಸ್ಪರ್ಶವನ್ನು ಹಿರಿಯ ವಿದ್ಯಾರ್ಥಿಗಳ ಸಂಘ ಮಾಡಿದಾಗ ಅವರ ಬಾಳು ಚಂದವಾಗುತ್ತದೆ.ಸಂಸ್ಥೆಗೆ ಬಂದಾಗ ಮಾತೃ ಸಂಸ್ಥೆಗೆ ಬಂದಂತಾಗುತ್ತದೆ.ಹೊಸಚಿಗುರು ಹಳೆಬೇರು ಕೂಡಿರಲು ಮರ ಸೊಬಗು ಎಂದರು.

ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗ್ಡೆಯವರು ಮಾತನಾಡಿ” ಸವಿ ಸವಿ ನೆನಪು ಸಾವಿರ ನೆನಪು, ಸಾವಿರ ಕಾಲಕ್ಕೂ ಮಾಗದ ನೆನಪು ಅನ್ನುವಂತೆ ಕಾಲೇಜು ದಿನಗಳನ್ನು ನೆನಪಿಸುತ್ತೇವೆ ಎಂದರು.

ಹಿರಿಯ ವಿದ್ಯಾರ್ಥಿಗಳ‌ ಅಧ್ಯಕ್ಷ ಪಿತಾಂಬರ ಹೆರಾಜೆ ಸ್ವಾಗತಿಸಿ, ಕಾರ್ಯದರ್ಶಿ ಧನಂಜಯ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾದ್ಯಾಪಕರಾದ ಡಾ.ದಿವಾಕರ್ ಕೊಕ್ಕಡರವರು ನಿರೂಪಣೆ ಮಾಡಿದರು.

ಎಸ್ ಡಿ ಎಂ ಗ್ಲೋಬಲ್ ಸಂಘದ ಅಬ್ದುಲ್ ರಜಾಕ್, ರಾಜೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಎಸ್ ಡಿ ಎಂ ಸಂಸ್ಥೆಯ ಪೂರನ್ ವರ್ಮ, ನಿವೃತ್ತ ಪ್ರಾಂಶುಪಾಲರಾದ ಡಾ.ಕೆ.ಜಯಕುಮಾರ್ ಶೆಟ್ಟಿ ಹಿರಿಯ ವಿದ್ಯಾರ್ಥಿಗಳಾದ ಶೈಲೇಶ್ ಉಜಿರೆ, ಶ್ರೀನಾಥ್ ಎಂ ಪಿ, ಶೇಖ್ ಲತೀಫ್, ಜಗದೀಶ್ ಇಂಜಿನಿಯರ್, ಸಂಪತ್ ಕುಮಾರ್ ಬಿ.ಪಿ, ತ್ರಿವಿಕ್ರಮ ಹೆಬ್ಬಾರ್ , ದಿಶಾ ಅರುಣ್ ಕುಮಾರ್, ಸೋಮಶೇಖರ್ ಶೆಟ್ಟಿ, ಯೋಗೀಶ್ ನಡಕ್ಕರ, ಹೀಗೆ ನೂರಾರು ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಶ್ರೀಧರ ಕೆ ವಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here