ಭಾರತ ಕಮ್ಯೂನಿಸ್ಟ್‌ ಪಕ್ಷ ಬೆಳ್ತಂಗಡಿ ತಾಲೂಕು ವತಿಯಿಂದ ವಿಧಾನಸಭಾ ಚುನಾವಣೆ ಕುರಿತು ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ಭಾರತ ಕಮ್ಯೂನಿಸ್ಟ್‌ ಪಕ್ಷ ಬೆಳ್ತಂಗಡಿ ತಾಲೂಕು ವತಿಯಿಂದ ಮುಂಬರುವ ವಿಧಾನಸಭಾ ಚುನಾವಣೆ ಕುರಿತು ಪತ್ರಿಕಾಗೋಷ್ಠಿ ಎ.15ರಂದು ನಡೆಯಿತು.

ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯ ಮುನಿರ್ ಕಾಟಿಪಳ್ಳ ಸುದ್ದಿಗೋಷ್ಠಿಯನ್ನು ನಡೆಸಿಕೊಟ್ಟರು.ದ.ಕ ಜಿಲ್ಲೆಯಲ್ಲಿ ಕಳೆದ 5 ವರ್ಷ ಹರೀಶ್ ಪೂಂಜ ಮಾಡಿದ ಸಾಧನೆಗಳ ಅಂಕಿಅಂಶಗಳು ಕೊಡಬೇಕು ಅದನ್ನು ಬಿಟ್ಟು ಭ್ರಷ್ಟಾಚಾರ , ಮರಳುದಂತೆ ಮಾಡುತ್ತಿದ್ದಾರೆ.ಭ್ರಷ್ಟ, ಹಾಗೂ ಕೋಮುವಾದಿ ಆಡಳಿತದಿಂದ ರಾಜ್ಯದಲ್ಲಿ ಅಸಹನೀಯ ಸ್ಥಿತಿ ನಿರ್ಮಿಸಿರುವ ಬಿಜೆಪಿಯನ್ನು ಸೋಲಿಸಲು ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಿ ದುಡಿಯಬೇಕು, ಆ ಮೂಲಕ ಶಿಕ್ಷಣ, ಉದ್ಯೋಗ, ಆರೋಗ್ಯದಂತಹ ಜನರ ಬದುಕಿನ ಪ್ರಶ್ನೆಗಳನ್ನು ಮುನ್ನಲೆಗೆ ತರಬೇಕಿದೆ. ಸಂಘಪರಿವಾರದ ಪ್ರಯೋಗ ಶಾಲೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ ಕೋಮುವಾದಿ ಅಜೆಂಡಾಗಳನ್ನು ಸೋಲಿಸಲಿಕ್ಕಾಗಿ ಶಕ್ತಿಮೀರಿ ದುಡಿಯಲು ಸಿಪಿಐಎಂ ನಿರ್ಧರಿಸಿದೆ.ಬಿಜೆಪಿ ಆಡಳಿತದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎಲ್ಲಾ ವಿಷಯಗಳಲ್ಲಿ ಹಿಂದೆ ಬಿದ್ದಿದೆ.ಶಿಕ್ಷಣ, ಆರೋಗ್ಯದಂತಹ ಬದುಕಿನ ಮೂಲಭೂತ ಅಗತ್ಯಗಳ ಖಾಸಗೀಕರಣ ಅತ್ಯಂತ ವೇಗಪಡೆದಿದೆ.ಉದ್ಯೋಗ ಸೃಷ್ಟಿಯ ಯೋಜನೆಗಳಿಲ್ಲದೆ ವಿದ್ಯಾವಂತ ಯುವಜನರು ವ್ಯಾಪಕವಾಗಿ ಊರು ತೊರೆಯುತ್ತಿದ್ದಾರೆ. ಹಿಜಾಬ್‌, ವ್ಯಾಪಾರ, ಬಹಿಷ್ಕಾರದಂತಹ ವಿಷಯಗಳನ್ನು ಮುಂದಿಟ್ಟು ಸರಕಾರವೇ ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುವ, ಆ ಮೂಲಕ ಜನಸಾಮಾನ್ಯರ ಗಮನವನ್ನು ಬೇರೆಡೆಗೆ ಸೆಳೆಯುವ ಕೆಲಸ ನಡೆದಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಮುಖಂಡ ಬಿ.ಎಮ್ ಭಟ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here