



ಬೆಳ್ತಂಗಡಿ: ಕೆನರಾ ಬ್ಯಾಂಕ್ ಪ್ರಯೋಜಕತ್ವದ ಕ್ಯಾನ್ ಫಿನ್ ಹೋಮ್ ಲಿಮಿಟೆಡ್ ಒದಗಿಸಿರುವ ರೂ.69 ಲಕ್ಷ ವಿವಿಧ ಯೋಜನೆಗಳನ್ನು ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ರೋಟರಿ ಬೆಂಗಳೂರು ಇಂದಿರಾನಗರ ಕ್ಲಬ್‌ಗಳ ಸಹಯೋಗದಲ್ಲಿ ಸಂಸ್ಥೆಯು ರೂ.69 ಲಕ್ಷ ಮೊತ್ತದ ವಿವಿಧ ಕೊಡುಗೆಗಳ ಉದ್ಘಾಟನೆ ಎ.15 ರಂದು ಕಾಶಿಬೆಟ್ಟು ರೋಟರಿ ಸಮುದಾಯ ಭವನದಲ್ಲಿ ನಡೆಯಿತು.



ಕ್ಯಾನ್ ಫಿನ್ ಹೋಮ್ ಲಿಮಿಟೆಡ್ ಸಂಸ್ಥೆಯ ಜನರಲ್ ಮೆನೇಜರ್ ಶಮಿಳಾ ಎಂ. ವಿವಿಧ ಯೋಜನೆಗಳನ್ನು ಹಸ್ತಾಂತರ ಮಾಡುವ ಮೂಲಕ ಉದ್ಘಾಟಿಸಿದರು.ಕ್ಯಾನ್ ಫಿನ್ ಹೋಮ್ ಲಿಮಿಟೆಡ್ ನ ಡಿ.ಜಿ.ಎಂ ಪ್ರಶಾಂತ್ ಜೋಶಿ, ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ರೋ.ಪ್ರಕಾಶ್ ಕಾರಂತ್, ಸಹಾಯಕ ಗವರ್ನರ್ ಮೇಜರ್ ಜನರಲ್ ರೋ. ಎಂ. ವಿ. ಭಟ್, ಇಂದಿರಾ ನಗರ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಜಗದೀಶ್ ಮುಗುಳಿ, ಬೆಳ್ತಂಗಡಿ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ರೋಟರಿ ಕ್ಲಬ್ ಕಾರ್ಯದರ್ಶಿ ರಕ್ಷಾ ರಾಘನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷೆ ರೋ.ಮನೋರಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ತಾಲೂಕಿನ ಆಯ್ದ 6 ಸರಕಾರಿ ಪ್ರೌಢ ಶಾಲಾ 150 ಪ್ರತಿಭಾನ್ವಿತ ಹೆಣ್ಣು ಮಕ್ಕಳಿಗೆ ರೂ 10.05 ಲಕ್ಷ ವೆಚ್ಚದಲ್ಲಿ ಸೈಕಲ್, ರೂ.11.89 ಲಕ್ಷ ವೆಚ್ಚದಲ್ಲಿ ಬೆಳ್ತಂಗಡಿ ಸರಕಾರಿ ಜೂನಿಯರ್ ಕಾಲೇಜಿಗೆ ಆಫ್ ಗೀಡ್ 2. ಸೋಲಾರ್ ಯೂನಿಟ್, ರಾಸಾಯನ ಶಾಸ್ತ್ರ ಪ್ರಯೋಗಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವಿಜ್ಞಾನ ಪ್ರಯೋಗಾಲಯಕ್ಕೆ 2 ಕೆ.ಎ ಇನ್‌ವರ್ಟರ್ ಅಳವಡಿಕೆ, 13 ಸರ್ಕಾರಿ ಶಾಲೆಗಳಿಗೆ ರೂ 1.25 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಫಲಕಗಳ ಅಳವಡಿಕೆ, 11.83 ಲಕ್ಷ ವೆಚ್ಚದಲ್ಲಿ ಸರಕಾರಿ ಪ್ರೌಢಶಾಲೆ, ನಡದಲ್ಲಿ ಆಫ್ ಗ್ರಿಡ್ ಸೋಲಾರ್ ಪವರ್ ಅಳವಡಿಕೆ, ರೂ 1-89 ಲಕ್ಷ ವೆಚ್ಚದಲ್ಲಿ ಬಳಂಜದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಆಫ್ ಗ್ರೀಡ್ ಸೋಲಾರ್ ಪವರ್, ಶಾಲಾ ಕೊಠಡಿಗಳ ಪಾರ್ಟಿಶನ್ ಹಾಗೂ ತೆರೆದ ಸಭಾಂಗಣ, ಕಳೆಂಜ ನಂದ ಗೋಕುಲ ಶಾಲೆಯ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್‌ಗೆ 45 ಹಸುಗಳ ಒಂದು ವರ್ಷದ ವೆಚ್ಚದ ಬಾಬು ರೂ 11.76 ಲಕ್ಷ ದೇಣಿಗೆ ಹಸ್ತಾಂತರ ಮಾಡಲಾಯಿತು.ವಿವಿಧ ಶಾಲಾ ಮಕ್ಕಳು, ಹೆತ್ತವರು, ಶಿಕ್ಷಕರು, ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.








