ಶಿಶಿಲ: ಚುನಾವಣಾ ಹಿನ್ನಲೆಯಲ್ಲಿ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂರವರ ಬಗೆಗಿನ ಲೇಖನದಲ್ಲಿ ಶಿಶಿಲದ ಹೇವಾಜೆ ಶಾಲೆಗೆ 2 ಲಕ್ಷ ಅನುದಾನ ಕೊಟ್ಟಿರುವ ಅವರೇ ನೀಡಿದ ಮಾಹಿತಿ ನಮೂದಾಗಿತ್ತು.
ಇದನ್ನು ಶಿಶಿಲ ಸುದ್ದಿ ಪತ್ರಿಕೆಯ ಅಂದಿನ ಏಜೆಂಟ್ ಕೊರಗಪ್ಪ ಸುದ್ದಿ ಆಡಳಿತ ಮಂಡಳಿಯ ಜೊತೆ ಪ್ರಶ್ನಿಸಿದ್ದರು.
ಈ ಹಿನ್ನಲೆಯಲ್ಲಿ ಸುದ್ದಿ ರಕ್ಷಿತ್ ರವರಲ್ಲಿ ಹೇವಾಜೆ ಶಾಲೆಗೆ 2 ಲಕ್ಷ ಕೊಟ್ಟಿದ್ದೀರೋ ಇಲ್ಲವೋ ಎಂದು ಪ್ರಶ್ನಿಸಿತ್ತು.
ಇದಕ್ಕೆ ಸಾಕ್ಷಿಯೆಂಬಂತೆ ರಕ್ಷಿತ್ 2 ಲಕ್ಷ ಅನುದಾನ ನೀಡಿರುವ ಬಗ್ಗೆ ಮಾಹಿತಿ ಪತ್ರ ಒದಗಿಸಿರುವುದನ್ನು ಸುದ್ದಿ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು.
ಈ ಬಗ್ಗೆ ಕೊರಗಪ್ಪರವರು ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆ ತೆಗೆಸಿದ್ದು, ಇದರಲ್ಲಿ ವಿಧಾನಪರಿಷತ್ ಸದಸ್ಯರಾದ ಬಿ ಕೆ ಹರಿಪ್ರಸಾದ್ ಮೂಲಕ ಹೇವಾಜೆ ಶಾಲೆಗೆ ರಕ್ಷಿತ್ ರವರಿಂದ ಯಾವುದೇ ಅನುದಾನ ಬಂದಿಲ್ಲವೆಂದು ನಮೂದಿಸಲಾಗಿದೆ.
ಒಟ್ಟಿನಲ್ಲಿ ಈ ಕುರಿತು ಹೇವಾಜೆ ಶಾಲೆಯವರು, ಬಿ ಕೆ ಹರಿಪ್ರಸಾದ್, ರಕ್ಷಿತ್ ಶಿವರಾಂ ಸ್ಪಷ್ಟಣೆ ನೀಡಬೇಕಿದೆ.ಅನುದಾನ ಬಂದಿದ್ಯಾ ಇಲ್ಲವಾ ಅನ್ನುವ ಅನುಮಾನ ಬಗೆಹರಿಸಬೇಕಾಗಿದೆ.
ಈ ವರದಿಯಲ್ಲಿ ಕೊರಗಪ್ಪ ಗೌಡರು ಮಾಹಿತಿ ಹಕ್ಕಿನಲ್ಲಿ ತೆಗೆದು ವೈರಲ್ ಮಾಡಿರುವ ಪ್ರತಿಯನ್ನು ಲಗ್ಗತ್ತಿಸಲಾಗಿದೆ.