





ಕಳೆಂಜ: ನವಶಕ್ತಿ ಗುರುವಾಯನಕೆರೆಯ ಖ್ಯಾತ ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ರವರು ಕಳೆಂಜದ ನಂದಗೋಕುಲ ಗೋಶಾಲೆಗೆ ರೂ. 2ಲಕ್ಷ 50 ಸಾವಿರ ಗಳನ್ನು ನೀಡಿದರು.


ಗೋನಂದಾದೀಪೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದಾಗ ಗೋವಿನ ಬಗ್ಗೆ ಮತ್ತು ಗೋಸಂತತಿಯ ರಕ್ಷಣೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿ 25 ವರ್ಷಗಳ ಕಾಲ ನಿರಂತರವಾಗಿ ತಮ್ಮ ಹುಟ್ಟುಹಬ್ಬದಂದು ವಾರ್ಷಿಕ ರೂ. 10 ಸಾವಿರದಂತೆ ಗೋಶಾಲೆಗೆ ನೀಡುವುದಾಗಿ ಹೇಳಿದ್ದರು. ಅದರಂತೆ ಗೋಶಾಲೆಗೆ ರೂ 2ಲಕ್ಷ 50 ಸಾವಿರ ರೂಗಳನ್ನು ನೀಡಿದ್ದಾರೆ.








