





ಬೆಳ್ತಂಗಡಿ :ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಧ್ಯಕರಾದ ಜೇಸಿ ಕಿರಣ್ ಕುಮಾರ್ ಶೆಟ್ಟಿ ಅವರ ಮನೆಯಲ್ಲಿ ನಡೆದ ಕುಟುಂಬೋತ್ಸವ ಕಾರ್ಯಕ್ರಮದಲ್ಲಿ ಒಂದು ಅನೂಹ್ಯವಾದ ಪ್ರಯತ್ನವನ್ನು ಮಾಡಿದೆ. ಸೆಲ್ಯೂಟ್ ದ ಸೈಲೆಂಟ್ ವರ್ಕರ್ಸ್ ಸಂಚಾರಿ ಆರಕ್ಷಕರಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ರೋಹಿನಾಥ್ ಮತ್ತು ಶ್ರೀಮತಿ ಸವಿತಾ ಶೆಟ್ಟಿ ಇವರುಗಳನ್ನು ಗುರುತಿಸಿ ಗೌರವಿಸಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಅಧ್ಯಕ್ಷರಾದ ಜೆಸಿ ಶಂಕರ್ ರಾವ್ ವಹಿಸಿ, ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ವರ್ತಕರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಸುದ್ದಿಬಿಡುಗಡೆ ವಾರ ಪತ್ರಿಕೆಯ ಬೆಳ್ತಂಗಡಿ ವ್ಯವಸ್ಥಾಪಕ ಮಂಜುನಾಥ್ ರೈ ಮತ್ತು ಬೆಳ್ತಂಗಡಿ ಸರಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕಿಶೋರ್ ಕುಮಾರ್ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಜೆಸಿಐ ಬೆಳ್ತಂಗಡಿಯ ನಿಕಟ ಪೂರ್ವ ಅಧ್ಯಕ್ಷ ಜೆಸಿ ಪ್ರಸಾದ್ ಬಿ. ಎಸ್, ಮಹಿಳಾ ಜೆಸಿ ಸಂಯೋಜಕಿ ಮಮಿತಾ ಸುಧೀರ್, ಜೂನಿಯರ್ ಜೆಸಿ ಅಧ್ಯಕ್ಷ ಜೆಜೆಸಿ ರಾಮಕೃಷ್ಣ ಮತ್ತು ಕಾರ್ಯಕ್ರಮ ಸಂಯೋಜಕ ಜೆಸಿ ಸೃಜನ್ ರ್ ರೈ ಉಪಸ್ಥಿತರಿದ್ದರು.



ಘಟಕದ ಉಪಾಧ್ಯಕ್ಷ ಜೆಸಿ ರಂಜಿತ್ ವೇದಿಕೆಗೆ ಅತಿಥಿಗಳನ್ನು ಬರಮಾಡಿಕೊಂಡರು, ಸದಸ್ಯ ಜೆಸಿ ಅನುದೀಪ್ ಜೈನ್ ಜೆಸಿ ವಾಣಿ ವಾಚಿಸಿದರು, ಸದಸ್ಯೆ ಜೆಸಿ ಸುಭಾಷಿಣಿ ಸನ್ಮಾನಿತರ ಪರಿಚಯ ವಾಚಿಸಿದರು.
ಘಟಕದ ಕಾರ್ಯದರ್ಶಿ ಜೆಸಿ ಸುಧೀರ್ ಕೆ ಎನ್ ಧನ್ಯವಾದ ಸಮರ್ಪಿಸಿದರು. ನಂತರ ನಡೆದ ಮನೋರಂಜನಾ ಕಾರ್ಯಕ್ರಮವನ್ನು ಘಟಕದ ಸದಸ್ಯೆ ಜೆಸಿ ಆರೋಲಿನ್ ಡಿಸೋಜಾ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಜೆಸಿಐ ಬೆಳ್ತಂಗಡಿಯ ಪೂರ್ವಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.









