ಬಳಂಜ: ಸರ್ವೋದಯ ಫ್ರೆಂಡ್ಸ್ ದಶಮಾನೋತ್ಸವ ಹಾಗೂ ಅಟ್ಲಾಜೆ ಶಾಲಾ ಬೆಳ್ಳಿಹಬ್ಬದ ಕ್ರೀಡಾಕೂಟದ ಉದ್ಘಾಟನೆ

0

ಬಳಂಜ: ಸ.ಕಿ.ಪ್ರಾ.ಶಾಲೆ ಅಟ್ಲಾಜೆ ಇಲ್ಲಿಯ 25ನೇ ವರ್ಷದ ಬೆಳ್ಳಿಹಬ್ಬದ ಸಂಭ್ರಮಾಚರಣೆ ಹಾಗೂ ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ ಇದರ ದಶಮಾನೋತ್ಸವದ ಸಂಭ್ರಮದ ಪ್ರಯುಕ್ತ ಜ.22 ರಂದು ಆಟೋಟ ಸ್ಪರ್ಧೆ ನಡೆಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಹಿರಿಯ ಬೀಡಿ ಉದ್ಯಮಿ ಮಹಾಬಲ ಶೆಟ್ಟಿ ಕಾರ್ಯಾಣ ನೇರವೇರಿಸಿ ಶುಭಕೋರಿದರು.

ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ಸತೀಶ್ ರೈ ಬಾರ್ದಡ್ಕ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ವಾಮನ ಬಾಳಿಗ ಕಾರ್ಯಾಣ, ಪ್ರಗತಿಪರ ಕೃಷಿಕ ಶಿವ ಸುಬ್ರಹ್ಮಣ್ಯ ಭಟ್ ಕಾರ್ಯಾಣ, ಪ್ರಗತಿ ಪರ ಕೃಷಿಕ ರವೀಂದ್ರ ಪೂಜಾರಿ ಹೇವ, ಶ್ಯಾಮ ಬಂಗೇರ ಪೆರಾಜೆ, ಸಾಂತಪ್ಪ ಸುವರ್ಣ, ಗೋಪಾಲಕೃಷ್ಣ ಭಟ್ ಗಿಂಡಾಡಿ, ಬಳಂಜ ಗ್ರಾ.ಪಂ.ಮಾಜಿ ಅಧ್ಯಕ್ಷೆ ರತ್ನಾ ಹೇವ, ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ ಇದರ ಅಧ್ಯಕ್ಷ ಯಶೋಧರ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಸಂದೇಶ್ ಪೆರಾಜೆ,ಶಾಲಾ ಮುಖ್ಯೋಪಾಧ್ಯಾಯರಾದ ಪ್ರಮೋದ್ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here