ಗೇರುಕಟ್ಟೆ : ಕಳಿಯ ಬದಿನಡೆ ಉಳ್ಳಾಕುಲು ಉಳ್ಳಾಲ್ತಿ ಪರಿವಾರ ಸಾನಿಧ್ಯ, ಮಂಜಲಡ್ಕ ದೈವ ಕೊಡ ಮಣಿತ್ತಾಯ ಪರಿವಾರ ಸಾನಿಧ್ಯದಲ್ಲಿ ಡಿ.22 ಮತ್ತು 23 ರಂದು ನೇಮೋತ್ಸವ ನಡೆಯಿತು.
ಡಿ.22 ರಂದು ಕಳಿಯ ಬೀಡು ಚಂದ್ರನಾಥ ಸ್ವಾಮಿ,ಪದ್ಮವತಿ ದೇವರಿಗೆ ವಿಶೇಷ ಪೂಜೆ, ಗೇರುಕಟ್ಟೆಯಿಂದ ಬದಿನಡೆಗೆ ಹೊರ ಕಾಣಿಕೆ, ಮಧ್ಯಾಹ್ನ ಅನ್ನ ಸಂತರ್ಪಣೆ,ಕಳಿಯ ಬೀಡಿನಿಂದ ಬದಿನಡೆ,ಮಂಜಲಡ್ಕಕ್ಕೆ ದೈವಗಳ ಭಂಡಾರ ಹೊರಟ್ಟಿತು.ನಂತರ ರಾತ್ರಿ ವಿಶೇಷ ಹೂವಿನ ಪೂಜೆ,ಉತ್ಸವ ಬಲಿ, ರಾತ್ರಿ ದೈವಗಳಿಗೆ ನೇಮೋತ್ಸವ ನಡೆಯಿತು.
ಡಿ.23 ರಂದು ಬದಿನಡೆ, ಮಂಜಲಡ್ಕ ವಿಶೇಷ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ,ಸಂಜೆ ವಿಶೇಷ ಸಂಕ್ರಾಂತಿ ಪೂಜೆ,ಅನ್ನ ಸಂತರ್ಪಣೆ, ರಾತ್ರಿ ದೈವಗಳಿಗೆ ನೇಮೋತ್ಸವ ನಡೆಯಿತು.
ಡಿ.24 ರಂದು ಧ್ವಜಾವರೋಹಣ ನಂತರ ಎರಡು ಕ್ಷೇತ್ರಗಳಿಂದ ದೈವಗಳ ಭಂಡಾರ ಕಳಿಯ ಬೀಡಿಗೆ ನಿರ್ಗಮನ ಹಾಗೂ ಸಂಪ್ರೋಕ್ಷಣೆ ಕಲಶ ಜರುಗಿತು. ಉಳ್ಳಾಕುಲು-ಉಳ್ಳಾಲ್ತಿ,ರಕ್ತೇಶ್ವರಿ,ಮಹಿಷಂತ್ತಾಯ,ಪಂಜುರ್ಲಿ ದೈವಗಳಿಗೆ ಹಾಗೂ ಮಂಜಲಡ್ಕ ದೈವ ಕೊಡಮಣಿತ್ತಾಯ,ವ್ಯಾಘ್ರ ಚಾಮುಂಡಿ ಮತ್ತು ಕಲ್ಕುಡ ಕಲ್ಲುರ್ಟಿ ಕಾಳಮ್ಮ ದೈವಗಳಿಗೆ ಕಲಶಾಭಿಷೇಕ ಪರ್ವ,ಉತ್ಸವ ಹಾಗೂ ನೇಮೋತ್ಸವ ವಿಜ್ಞಂಬಣೆಯಿಂದ ನಡೆಯಿತು.
ಕ್ಷೇತ್ರದ ತಂತ್ರಿಗಳಾದ ವೇದ ಮೂರ್ತಿ ಕುಂಠಿನಿ ಶ್ರೀ ರಾಘವೇಂದ್ರ ಭಾಂಗಿಣ್ಣಯರು ಹಾಗೂ ಕೊಯ್ಯೂರು ಪಂಚದುರ್ಗ ದೇವಸ್ಥಾನದ ಪ್ರಧಾನ ಅರ್ಚಕರಾದ ಅಶೋಕ ಕುಮಾರ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೇರವೇರಿತು.
ಈ ಸಂದರ್ಭದಲ್ಲಿ ಕಳಿಯ ಬೀಡು ಮನೆತನದ ಶ್ರೀಮತಿ ಸುನಂದ ನಮಿರಾಜ ಅಜ್ರಿ ಮತ್ತು ಮಕ್ಕಳು, ನಡ ಗುತ್ತು ಧನಂಜಯ ಅಜ್ರಿ,ದೈವಗಳ ಮಧ್ಯಸ್ಥ ಎನ್.ರತ್ನಾಕರ ಖೊಂಡೆ, ನಡ ಗುತ್ತು ಮುನಿರಾಜ ಅಜ್ರಿ,ರಾಜಶೇಖರ ಅಜ್ರಿ,ಸುರೇಶ್ ಕುಮಾರ್ ಕಾಡಬೆಟ್ಟು, ಧರ್ಮ ದೈವಗಳ ವಾರ್ಷಿಕ ಜಾತ್ರಾ ಮಹೋತ್ಸವ ಅಧ್ಯಕ್ಷರಾದ ಕಳಿಯ ಬೀಡು ಸುರೇಂದ್ರ ಕುಮಾರ್ ಜೈನ್,ಕಾರ್ಯದರ್ಶಿ ಸದಾನಂದ ಶೆಟ್ಟಿ, ಕೋಶಾಧಿಕಾರಿ ರಾಘವ ಹೆಚ್,ಉಪಾಧ್ಯಕ್ಷರಾದ ತುಕಾರಾಮ ಪೂಜಾರಿ,ಕಮಲಾಕ್ಷ ಪೂಜಾರಿ, ಕರುಣಾಕರ ಶೆಟ್ಟಿ, ವಿಜಯ ಗೌಡ ಕಲಾಯಿತೊಟ್ಟು, ಜೊತೆ ಕಾರ್ಯದರ್ಶಿಗಳಾದ ಅವಿನಾಶ್, ಸುಂದರ ನಾಯ್ಕ,ಕುಳಾಯಿ,ಸಂಚಾಲಕರಾದ ಸುಧೀರ್ ಕುಮಾರ್ ಕಳಿಯ ಬೀಡು,ಕೇಶವ ಬಂಗೇರ ಬಳ್ಳಿದಡ್ಡ,ನವೀನ್ ಕುಮಾರ್, ದೋಣಿಪಲ್ಕೆ,ಪುರಂದರ ಗೇರುಕಟ್ಟೆ, ಗೌರವ ಸಲಹೆಗಾರರಾದ ಸುರೇಶ್ ಕುಮಾರ್ ಆರ್.ಎನ್.ವಸಂತ ಮಜಲು,ಡಾಕಯ್ಯ ಗೌಡ ಹೀರ್ಯ,ಶೇಖರ್ ನಾಯ್ಕ ಗೇರುಕಟ್ಟೆ, ಭುವನೇಶ್ ಗೇರುಕಟ್ಟೆ, ವಿವಿಧ ಸಮಿತಿ ಸದಸ್ಯರು,ಕಳಿಯ, ನ್ಯಾಯತರ್ಪು ಹಾಗೂ ಊರ,ಪರಊರ ಭಕ್ತಾದಿಗಳು ಭಾಗವಹಿಸಿದ್ದರು.