ಬೆಳ್ತಂಗಡಿ: ಇಲ್ಲಿಯ ಸಂತೆಕಟ್ಟೆ ಸುವರ್ಣ ಆರ್ಕೇಡ್ ಬಳಿಯ ಕಸದ ತೊಟ್ಟಿಯಲ್ಲಿ ಪೊಲೀಸರು ಧರಿಸುವ ನಾಲ್ಕು ಟೋಪಿ ಪತ್ತೆಯಾಗಿದ್ದು, ಕಸದ ತೊಟ್ಟಿಯಲ್ಲಿ ಈ ಟೋಪಿಗಳು ಹೇಗೆ ಬಂದವು ಎಂಬ ಕುತೂಹಲ ಸಾರ್ವಜನಿಕರನ್ನು ಕಾಡುತ್ತಿದೆ.
ನಾಲ್ಕು ಟೋಪಿಗಳಲ್ಲಿ ಮೂರು ಪೊಲೀಸರು ಧರಿಸುವ ಟೋಪಿಗಳಾಗಿದ್ದು, ಒಂದು ಬಿಳಿ ಟೋಪಿ ಇದೆ. ಇದು ಸಂಚಾರಿ ಪೊಲೀಸರು ಧರಿಸುವ ಟೋಪಿಯಾಗಿದೆ. ಪೊಲೀಸ್ ಸಮವಸ್ತ್ರ, ಬೆಲ್ಟ್, ಟೋಪಿ ಇದಕ್ಕೆ ಅದರದ್ದೇ ಆದ ಕಾನೂನು ನಿಯಮಗಳಿವೆ. ಹಾಳಾದ ಟೋಪಿ ಅಥವಾ ಸಮಸ್ತವನ್ನು ವಿಲೇ ಮಾಡುವಲ್ಲಿಯೂ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಲಾಗುತ್ತಿದೆ. ಆದರೆ ಸಾರ್ವಜನಿಕ ರಸ್ತೆ ಬದಿಯ ಕಸದ ತೊಟ್ಟಿಗೆ ಇವುಗಳನ್ನು ಎಸೆದು ಹೋಗುವುದು ಎಷ್ಟು ಸರಿ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ದೂರದ ಊರುಗಳಿಗೆ ಹೋಗುವ ಪೊಲೀಸರು ಇದನ್ನು ಇಲ್ಲಿ ಎಸೆದಿರಬಹುದೆಂಬ ಸಂಶಯ ಉಂಟಾಗಿದೆ. ಪೊಲೀಸರ ಈ ರೀತಿ ವರ್ತನೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
p>