ಕುದ್ಯಾಡಿ: ತೋಟಕ್ಕೆ ನುಗ್ಗಿದ ಕಾಡುಕೋಣ ಹಿಂಡು, ಕೃಷಿ ನಾಶ

0

ಕುದ್ಯಾಡಿ: ಕುದ್ಯಾಡಿ ಗ್ರಾಮದ ಮಂಜನಡ್ಕ ಮನೆಯ ವಾಸು ಪೂಜಾರಿಯವರ ತೋಟಕ್ಕೆ ಕಾಡುಕೋಣ ಹಿಂಡು ನುಗ್ಗಿ ಅಪಾರ ಪ್ರಮಾಣದ ಕೃಷಿ ಹಾನಿಯಾದ ಘಟನೆ ಕುದ್ಯಾಡಿಯಿಂದ ವರದಿಯಾಗಿದೆ.

ಸುಮಾರು 3 ವರ್ಷ ಅವಧಿಯ ಅಡಿಕೆ ಸಸಿಗಳ ತೋಟಕ್ಕೆ ಕಾಡುಕೋಣಗಳು ನುಗ್ಗಿ 150 ಕ್ಕೂ ಹೆಚ್ಚು ಗಿಡಗಳನ್ನು ಬೇರುಸಮೇತ ಕಿತ್ತು ನುಚ್ಚುನೂರು ಮಾಡಿಬಿಟ್ಟಿವೆ.

ಕಳೆದ ವರ್ಷ ಒಂದೂವರೆ ಎಕರೆಯಲ್ಲಿ ಭತ್ತ ಬೆಳೆದಿದ್ದು ಕಾಡುಕೋಣಗಳು ನುಗ್ಗಿ ಸಂಪೂರ್ಣ ಹಾಳು ಮಾಡಿದೆ. ಇಗಾಗಲೇ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದ್ದು ಬಂದು ಪರಿಶೀಲನೆ ನಡೆಸಿರುತ್ತಾರೆ.ಇಷ್ಟರತನಕ ಸರಕಾರದಿಂದ ಯಾವುದೇ ರೀತಿಯ ಪರಿಹಾರ ದೊರೆಯಲಿಲ್ಲವೆಂದು ವಾಸು ಪೂಜಾರಿಯವರು ತಿಳಿಸಿದ್ದಾರೆ.

ಈ ಭಾಗದಲ್ಲಿ ಕಾಡುಕೋಣ, ಚಿರತೆಗಳ ಹಾವಳಿಯಿಂದ ಜನರು ಬೇಸೆತ್ತು ಹೋಗಿದ್ದು ಅರಣ್ಯ ಇಲಾಖೆಯವರು ಈ ಪ್ರದೇಶದ ಕಡೆ ಗಮನಹರಿಸಬೇಕೆಂದು ಪಂಚಾಯತ್ ಸದಸ್ಯರಾದ ಶುಭಕರ ಪೂಜಾರಿ ಒತ್ತಾಯಿಸಿದ್ದಾರೆ.

p>

LEAVE A REPLY

Please enter your comment!
Please enter your name here