ಉಜಿರೆ: ಉಜಿರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಕಾಮಧೇನು ಇದರ ಉದ್ಘಾಟನೆ ಡಿ.20 ರಂದು ನಡೆಯಿತು.
ನೂತನ ಕಟ್ಟಡವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಸಾಂದ್ರಲೀಕರಣ ಉದ್ಘಾಟನೆಯನ್ನು ಮಂಗಳೂರು ದ. ಕ. ಹಾ. ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ನೆರವೇರಿಸಿದರು.
ಕಚೇರಿ ಉದ್ಘಾಟನೆಯನ್ನು ದ. ಕ. ಹಾ. ಒಕ್ಕೂಟದ ವ್ಯವಸ್ಥಾಪಕ ನಿರ್ದೆಶಕ ಡಿ. ಅಶೋಕ್, ಗೋದಾಮು ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ
ಡಾ| ಎಲ್. ಹಚ್, ಮಂಜುನಾಥ್ ನೆರವೇರಿಸಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುರೇಶ ಗೌಡ ಕೂಡಿಗೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ. ಕ. ಹಾ. ಒಕ್ಕೂಟದ ನಿರ್ದೇಶಕರುಗಳಾದ ನಿರಂಜನ ಬಾವಂತಬೆಟ್ಟು, ಪದ್ಮನಾಭ ಶೆಟ್ಟಿ ಅರ್ಕಜೆ,
ಸವಿತ ಎನ್. ಶೆಟ್ಟಿ,ದ. ಕ. ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ. ಅಶೋಕ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ,, ಉಪ ವ್ಯವಸ್ಥಾಪಕ ಡಾ. ಚಂದ್ರ ಶೇಖರ್ ಭಟ್, ವಿಸ್ತರಣಾಧಿಕಾರಿ ಆದಿತ್ಯ ಚಿದ್ಗಲ್ಲು, ಉಜಿರೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಸೌಮ್ಯಲತಾ, ಉಪಾಧ್ಯಕ್ಷ ವಿಜಯ ಪೂಜಾರಿ, ನಿರ್ದೇಶಕರು, ಉಜಿರೆ ಗ್ರಾಮ ಪಂಚಾಯತ್ ಪಿ. ಡಿ ಒ. ಪ್ರಕಾಶ್ ಶೆಟ್ಟಿ, ವಿವಿಧ ಹಾಲು ಉತ್ಪಾದಕರ ಸಂಘದ ಅಧ್ಯಕ್ರು, ನಿರ್ದೇಶಕರು, ಸಂಘದ ಸದಸ್ಯರು, ಊರವರು ಹಾಜರಿದ್ದರು.