ಅಂಡಿಂಜೆ: ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದ. ಕ. ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಅಂಡಿಂಜೆ ಇದರ ಶಾಲಾ ವಾರ್ಷಿಕೋತ್ಸವ ಸಂಭ್ರಮ
ಡಿ.17 ರಂದು ನಡೆಯಿತು.
ಧ್ವಜಾರೋಹಣವನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಮೇಶ್ ಕುಮಾರ್ ಪಿ. ನೆರವೇರಿಸಿದರು.
ಅನಂತರ ನಡೆದ ಶೈಕ್ಷಣಿಕ ವಿಷಯ ಪ್ರಸ್ತುತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ನಿವೃತ್ತ ಶಿಕ್ಷಕ ಜಗನ್ನಾಥ ಸಫಲಿಗ ವಹಿಸಿದ್ದರು. ಕಾಸರಗೋಡು ಕೇಂದ್ರೀಯ ವಿದ್ಯಾಲಯದ ನಿವೃತ್ತ ಮುಖ್ಯ ಶಿಕ್ಷಕ ಸೂರ್ಯ ನಾರಾಯಣ ಭಟ್ ಎಸ್, ಶೈಕ್ಷಣಿಕ ಸ್ಥಿತಿ ಗತಿ, ಶಿಶು ಕೇಂದ್ರೀತ ಶಿಕ್ಷಣದಲ್ಲಿ ಪೋಷಕರ ಪಾತ್ರ ಬಗ್ಗೆ ಮಾತನಾಡಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಡಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ವಹಿಸಿದ್ದರು. ಕಾರ್ಯಕ್ರಮವನ್ನು ಉಪನಿರ್ದೇಶಕರು ಹಾಗೂ ಮಂಗಳೂರು ಡಯಟ್ ಪದನಿಮಿತ್ತ ಪ್ರಾಂಶುಪಾಲೆ ರಾಜಲಕ್ಷ್ಮಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಡಯಟ್ ಉಪನ್ಯಾಸಕ ಪೀತಾಂಬಾರ, ಅಂಡಿಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ವೇತಾ, ಸದಸ್ಯರುಗಳಾದ ಸುರೇಶ, ನಿತಿನ್, ಪರಮೇಶ್ವರ, ರಂಜಿತ್, ಸೌಮ್ಯ, ಭಾಗವಹಿಸಿದ್ದರರು.
ಬಳಿಕ ಯುವಕ ಮಂಡಲ (ರಿ) ಅಂಡಿಂಜೆ ಇವರು ಶಾಲಾ ಬಳಿ ನಿರ್ಮಿಸಿ ಕೊಟ್ಟ ಬಸ್ಸು ತಂಗುದಾಣದ ಲೋಕಾರ್ಪಣೆ ನಡೆಯಿತು. ಶಾಲೆಯ ಮುಖ್ಯ ಶಿಕ್ಷಕ ಎಂ. ಗುರುಮೂರ್ತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವಂದರ ಸಾಲಿಯಾನ್, ತಾಯಂದಿರ ಸಮಿತಿ ಅಧ್ಯಕ್ಷೆ ಸುಹಾಸಿನಿ, ವಿದ್ಯಾರ್ಥಿ ನಾಯಕ ಶ್ರೇಯಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಪೋಷಕ ವೃಂದ,ಶಿಕ್ಷಕರು, ಊರವರು, ಭಾಗವಹಿಸಿ ಸಹಕರಿಸಿದರು.
ಶಾಲಾ ಮಕ್ಕಳಿಂದ ಪ್ರತಿಭಾ ವಲ್ಲರಿ ವಿವಿಧ ನೃತ್ಯ ವೈವಿಧ್ಯ, ಹಳೆ ವಿದ್ಯಾರ್ಥಿಗಳಿಂದ ಮತ್ತು ಊರವರಿಂದ ಸಾಂಸ್ಕೃಕ ಕಾರ್ಯಕ್ರಮ ನಡೆಯಿತು.