ಧರ್ಮಸ್ಥಳ: ಭಾರತದ ರಕ್ಷಣಾ ಸಚಿವಾಲಯದಿಂದ ಪೂನಾದ ಕೇಂದ್ರಿಯ ರಕ್ಷಣಾ ಡಿಪೋದ ಮೂಲಕ ನ.29 ರಂದು ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯಕ್ಕೆ ಟಿ-565 ಟ್ಯಾಂಕ್ ಕೊಡುಗೆಯಾಗಿ ನೀಡಲಾಯಿತು.
ದೇಶದ ರಕ್ಷಣಾ ಕಾರ್ಯದಲ್ಲಿ ಸುಮಾರು 40 ವರ್ಷಗಳ ಕಾಲ ಇದು ಬಳಕೆಯಾಗಿದ್ದು, 1971ರ ಇಂಡೋ ಪಾಕ್ ಯುದ್ದದಲ್ಲಿ ಮತ್ತು ಬಾಂಗ್ಲಾದೇಶ ವಿಮೋಚನಾ ಯುದ್ದದಲ್ಲೂ ಬಳಕೆಯಾಗಿದೆ.
ತಾಂತ್ರಿಕ ಮಾಹಿತಿ: 40 ಟನ್ ಗಳಷ್ಟು ತೂಕ ಹೊಂದಿರುವ ಟಿ- 565 ಟ್ಯಾಂಕ್ – 9 ಅಟಿ ಎತ್ತರ, 27.6 ಅಡಿ ಉದ್ದ, 10.8 ಅಗಲ ಹೊಂದಿದೆ.
ಗರಿಷ್ಠ ವೇಗ: ಗಂಟೆಗೆ 51 ಕಿ.ಮೀ ಸಾಮರ್ಥ್ಯ 500 ಅಶ್ವಶಕ್ತಿ.
1968 ರಲ್ಲಿ ಭಾರತೀಯ ಸೇನೆಗೆ ಇದನ್ನು ಸೇರಿಸಲಾಯಿತು.
ಇದನ್ನು ಸೋವಿಯತ್ ಒಕ್ಕೂಟ ಸಿಬ್ಬಂದಿ ತಯಾರಿಸಿದ್ದಾರೆ.
p>