






ಬೆಳ್ತಂಗಡಿ: ಪದ್ಮುಂಜ ಕೃಷಿ ಪತ್ತಿನ ಸಹಕಾರಿ ಸಂಘದ ರೈತ ಸಭಾಭವನದ ಅಡುಗೆಮನೆ ಹಾಗೂ ಊಟದ ವ್ಯವಸ್ಥೆಯ ನೂತನ ಕಟ್ಟಡಕ್ಕೆ ಅ.26 ರಂದು ಶಿಲಾನ್ಯಾಸ ನೆರವೇರಿಸಲಾಯಿತು.


ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷ ಅಶೋಕ್ ಪಿ., ನಿರ್ದೇಶಕರಾದ ನಾರಾಯಣ ಗೌಡ, ಉದಯ ಬಿ.ಕೆ., ಶೀಲಾವತಿ, ಡೀಕಯ್ಯ ಗೌಡ, ದಿನೇಶ್ ನಾಕ್, ಶಾರದಾ ಆರ್. ರೈ, ಪ್ರಭಾಕರ ಗೌಡ, ಉದಯ ಭಟ್ ಕೆ., ಪ್ರಸಾದ್ ಎ., ಚಂದನ್ ಕುಮಾರ್ ಎ., ಮತ್ತು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಂಕಿತಾ ಬಿ. ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.









